ಸ್ಕೂಟಿಯೊಂದು ಹೆದ್ದಾರಿ ಪಕ್ಕದ ಡಿವೈಡರ್ಗೆ ಡಿಕ್ಕಿ- ಇಬ್ಬರು ಮಕ್ಕಳು ಸೇರಿ, 3 ಜನರಿಗೆ ಗಂಭೀರ ಗಾಯ
ಕುಮಟಾ: ಸ್ಕೂಟಿಯೊಂದು ಹೆದ್ದಾರಿ ಪಕ್ಕದ ಡಿವೈಡರ್ಗೆ ಡಿಕ್ಕಿ ಹೊಡೆದು, ಸವಾರ ಸೇರಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಿರ್ಜಾನಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಬೆಟ್ಕುಳಿಯ ನಿವಾಸಿ ಇಸಾಕ್ ಹಾಗೂ ಆತನ ಇಬ್ಬರೂ ಮಕ್ಕಳು ಅಪಘಾತದಲ್ಲಿ ಗಾಯಗೊಂಡವರಾಗಿದ್ದು, ಇವರು ಕುಮಟಾದಿಂದ ಬೆಟ್ಕುಳಿಗೆ ಬರುತ್ತಿರುವಾಗ ಮಿರ್ಜಾನ ಬಳಿ ಹೆದ್ದಾರಿ ಪಕ್ಕದ ಡಿವೈಡರಿಗೆ ಸ್ಕೂಟಿ ಡಿಕ್ಕಿಯಾಗಿ ಸ್ಕೂಟಿ ಚಾಲಿಸುತ್ತಿದ್ದ ವ್ಯಕ್ತಿ ಹಾಗೂ ಆತನ ಇಬ್ಬರೂ ಮಕ್ಕಳು ಗಂಭೀರಗೊಂಡಿದ್ದಾರೆ. ಗಾಯಗೊಂಡ ಮೂವರನ್ನ 108ವಾಹನದ ಮೂಲಕ ಕುಮಟಾ ಸರಕಾರಿ ಆಸ್ಪತ್ರೆ ರವಾನಿಸಲಾಗಿದೆ.