ಲೋಕಸಭಾ ಚುನಾವಣೆ ಗೆಲುವಿಗೆ ಕಾಂಗ್ರೇಸ್ ಪಕ್ಷದಿಂದ ಸಾಂಘಿಕ ಹೋರಾಟ- ರವೀಂದ್ರ ನಾಯ್ಕ.
ಕಾರವಾರ: ಮುಂಬರುವ ಲೋಕಸಭಾ ಚುನಾವಣೆಯನ್ನು ಏದುರಿಸಲು ರಾಷ್ಟಿçÃಯ ಕಾಂಗ್ರೇಸ್ ಪಕ್ಷ ಸಂಪೂರ್ಣ ಸನ್ನದ್ದವಾಗಿದ್ದು, ಚುನಾವಣೆಯ ಗೆಲುವಿಗೆ ಕಾಂಗ್ರೇಸ್ ಪಕ್ಷದಿಂದ ಸಾಂಘಿಕ ಹೋರಾಟ ನಡೆಸಲಾಗುತ್ತಿದೆ ಎಂದು ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ದಿ. ೨೫ ರಂದು ಕಾರವಾರದ ಪ್ರಚಾರ ಸಮಿತಿಯ ಕಾರ್ಯಾಲಯದಲ್ಲಿ ಚುನಾವಣಾ ಪ್ರಚಾರಾರ್ಥ ಭೇಟ್ಟಿ ನೀಡಿ ಗ್ಯಾರಂಟಿ ಯೋಜನೆಯ ಪ್ರಮಾಣ ವಚನದ ನಂತರ ಮೇಲಿನಂತೆ ಹೇಳಿದರು.
ಕೇಂದ್ರ ಸರ್ಕಾರದ ಜನ ವಿರುದ್ಧ ನೀತಿ ಪ್ರಚಾರ ಸಂದರ್ಭದಲ್ಲಿ ಪ್ರಧಾನ ಅಂಶವಾಗಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಮತಗಳು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವುದೆಂದು ಎಂದು ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಪ್ರಮಾಣ ವಚನವನ್ನು ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪುರುಷೊತ್ತಮ ವಾಚಿಸಿದರು. ಸ್ವಾಗತ ಮತ್ತು ಪ್ರಸ್ತಾವಣೆಯನ್ನು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಮೀರ್ ನಾಯ್ಕ ಮಾಡಿದರು. ಸಭೆಯನ್ನು ಉದ್ದೇಶಿಸಿ ಕ್ಷೇತ್ರ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರೋ. ಜೆ ಪಿ ನಾಯ್ಕ, ರಾಜ್ಯ ಪ್ರಚಾರ ಸಮಿತಿ ಕೋ ಆರ್ಡಿನೆಟರ್ ಶಂಭು ಶೆಟ್ಟಿ ಮಾತನಾಡಿದರು. ಹಿರಿಯ ಧುರೀಣ ಎಮ್ ಇ ಶೇಖ್, ಕಿಸಾನ್ ಶಲ್ ಅಧ್ಯಕ್ಷ ರೋಹಿದಾಸ ವೈಂಗನಕರ್, ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಮಹಮ್ಮದ ಅಲಿ, ಯುವ ಕಾಂಗ್ರೇಸ್ ಅಧ್ಯಕ್ಷ ನಾಗರಾಜ ಗೌಡ, ಸಾಮಾಜಿಕ ಜಾಲತಾಣದ ಸೂರಜ್ ನಾಯ್ಕ, ಕಾಸಿಫ್ ಶೇಖ್ ಮುಂತಾದವರು ಉಪಸ್ಥಿತರಿದ್ದರು.
ಸ್ಥಳೀಯ ಶಾಸಕ ಸತೀಶ್ ಶೈಲ್ ನೇತ್ರತ್ವದಲ್ಲಿ ಮಾಜಾಲಿ, ಮುಡಗೇರಿ ಮುಂತಾದ ಗ್ರಾಮಗಳಲ್ಲಿ ಪ್ರಚಾರ ಸಮಿತಿಯ ಸದಸ್ಯರು, ಪಧಾದಿಕಾರಿಗಳು ಭಾಗವಹಿಸಿದ್ದರು.
೪ ನೇ ಹಂತದ ಪ್ರಚಾರ:
ಜಿಲ್ಲಾ, ತಾಲೂಕ ಮತ್ತು ಹೊಬಳಿ ಮಟ್ಟದ ಪ್ರಚಾರ ಕಾರ್ಯ ಮುಗಿದು, ಜಿಲ್ಲಾದ್ಯಂತ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಕೇಂದ್ರ ಲೋಕಸಭಾ ಕ್ಷೇತ್ರದ ೧೯೯೭ ಬೂತಗಳಲ್ಲಿ ಮನೆ ಮನೆಗೆ ಮತ ಯಾಚಿಸುವ ೪ ನೇ ಹಂತದ ಪ್ರಚಾರದ ಕಾರ್ಯ ಜರಗುತ್ತಿದೆ ಎಂದು ರವೀಂದ್ರ ನಾಯ್ಕ ಹೇಳಿದರು.