ಮುಂಡಗೋಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟಿçÃಯ ಕಾಂಗ್ರೇಸ್ ಪಕ್ಷವು ಅಭಿವೃದ್ಧಿ ಮತ್ತು ಗ್ಯಾರಂಟಿ ಕಾರ್ಡ ಸಾಧನೆ ಮೇಲೆ ಮತಯಾಚಿಸಿದರೇ, ಬಿಜೆಪಿ ಪಕ್ಷವು ಧರ್ಮ ಮತ್ತು ದೇವರನ್ನು ಚುನಾವಣಾ ಸಾಮಗ್ರಿಯಾಗಿ ಉಪಯೋಗಿಸುತ್ತಿರುವುದು ವಿಷಾದಕರ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.
ಕಾಂಗ್ರೇಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರವಾಗಿ ಚುನಾವಣಾ ಪ್ರಚಾರಾರ್ಥ ಆಗಮಿಸಿದ ಸಂದರ್ಭದಲ್ಲಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿರುವಂತಹ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷ ಜ್ಯಾರಿಗೆ ತಂದಿರುವ ಜನಪರ ಯೋಜನೆಗಳಿಂದ ಜನಸಾಮಾನ್ಯರಲ್ಲಿ ಕಾಂಗ್ರೇಸ್ ಪಕ್ಷವು ಮತಯಾಚಿಸುತ್ತಿದೆ. ಕ್ಷೇತ್ರದಾದ್ಯಂತ ಕಾಂಗ್ರೇಸ್ ಪರ ಉತ್ತಮ ವಾತಾವರಣ ಇದೆ ಎಂದು ಅವರು ತಿಳಿಸಿದರು.
ಧಾರ್ಮಿಕ ಭಾವನೆ:
ಭಾರತೀಯ ಜನತಾ ಪಕ್ಷವು ಧಾರ್ಮಿಕ ಭಾವನೆಗಳನ್ನ ಕೆರಳಿಸಿ, ಮತವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿರುವುದು ಖಂಡನಾರ್ಹ. ಈ ಬಾರಿ ಬಿಜೆಪಿ ಯಶಸ್ಸಾಗದು ಎಂದು ರವೀಂದ್ರ ನಾಯ್ಕ ಹೇಳಿದರು.