ಅಂಕೋಲಾ ಯಮರೂಪಿಯಾಗಿ ಬೈಕ್ ಗೆ ಅಡ್ಡ ಬಂದ ನಾಯಿ : ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು.
ಅಂಕೋಲಾ : ದಿನಾಂಕ 8/05/2024 ಬುಧವಾರ ರಾತ್ರಿ ನಾಯಿ ಒಂದು ಏಕಾಏಕಿ ಅಡ್ಡ ಬಂದ ಪರಿಣಾಮ ಬೈಕ್ ಸವಾರ ನವೀನ ಆನಂದು ನಾಯ್ಕ ಪ್ರಾಯ 33ವರ್ಷ. ಇವರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಸಿಮೆಂಟ್ನ ಡಿವೈಡರ್ಗೆ ಹೊಡೆದು ತೀವ್ರವಾಗಿ ಗಾಯಗೊಂಡಿದದ್ದರು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬದವರು ಮಂಗಳೂರಿನ ಕೆಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಿದ್ದರು.
ನವೀನ್ ನಾಯ್ಕ ಆಸ್ಪತ್ರೆಗೆ ದಾಖಲಾದಾಗ ಆರೋಗ್ಯದಲ್ಲಿ ಕೆಲವು ದಿನಗಳವರೆಗೆ ಚೇತರಿಸಿಕೊಂಡಿದ್ದರು.. ದೇವರ ವಿಧಿ ಆಟವೋ ಏನೋ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದ ಕಟ್ಟು ಮಸ್ತಾದ ಯುವಕ ಕೊನೆಗಳಿಗೆಯಲ್ಲಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ದಿನಾಂಕ 16/05/2024 ರಂದು ಮಂಗಳೂರಿನ ಕೆಎಸ್ ಹೆಗಡೆ ಆಸ್ಪತ್ರೆಯಲ್ಲಿ ತನ್ನ
ಕೊನೆ ಉಸಿರು ಎಳೆದಿದ್ದಾನೆ ಎಂದು ತಿಳಿದು ಬಂದಿದೆ.
ತಾಲೂಕಿನ ಹೊನ್ನಿಕೇರಿ ನಿವಾಸಿ ನವೀನ ನಾಯ್ಕ್ ಅವರು ಅಂಕೋಲಾದ ವೈಭವ್ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು .
ತಾಲೂಕಿನ ಚಿರಪರಿಚಿತ ಯುವಕ ನವೀನ್ ನಾಯ್ಕ ಎಲ್ಲರೊಂದಿಗೆ ಸ್ನೇಹಜೀವಿಯಾಗಿ ಬೆರೆತಿದ್ದ … ಇವನ ಅಂಗಡಿಗೆ ಬೈಕ್ ರಿಪೇರಿಗೆ ಬಂದ ಗ್ರಾಹಕರ ಹತ್ತಿರ ಹಣ ಇಲ್ಲದೆ ಇರೋ ಪಕ್ಷದಲ್ಲಿಯೂ ಕೂಡ ಎಷ್ಟೋ ಜನರಿಗೆ ವಾಹನವನ್ನು ಸರಿ ಮಾಡಿ ಹಣಕ್ಕಾಗಿ ನಿಲ್ಲುತ್ತಿದ್ದ.. ಮಾನವೀಯ ಮೌಲ್ಯವನ್ನು ಬೆಳೆಸಿಕೊಂಡಿದ್ದ ಯುವಕ ಯಾವಾಗಲೂ ನಗುಮುಖದಿಂದ ಇರುತ್ತಿದ್ದ ..ಸದೃಢ ಯುವಕ್ ಕೆಲವು ದಿನಗಳ ಹಿಂದೆ ತಾನು ಮದುವೆಯಾಗುವ ಕನಸನ್ನು ತನ್ನ ಗೆಳೆಯರ ಬಳಿ ಹಂಚಿಕೊಂಡಿದ್ದ ಎನ್ನಲಾಗಿದೆ..
ಮೃತರು ತಂದೆ, ತಾಯಿ, ಅಕ್ಕ ಸಹೋದರನನ್ನು ಅಗಲಿದ್ದಾರೆ..
ಗೆಳೆಯರ ಕಂಬನಿ : ತನ್ನ ಆಪ್ತ ಸ್ನೇಹಿತ ಕಳೆದುಕೊಂಡ ದುಃಖದಲ್ಲಿ ಮನೋಜ. ಯೋಗೀಶ. ಸುಭಾಷ್ ನಾಯ್ಕ್. ಹಲವಾರು ಸ್ನೇಹಿತರು. ಹೊನ್ನೆಕೇರಿಯ ಸಾರ್ವಜನಿಕರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕಂಬನಿ ಮಿಡಿದಿದ್ದಾರೆ.