ಕನ್ನಡದ ಕಾಶ್ಮೀರ ಉಮೇಶ ಮುಂಡಳ್ಳಿ ಅಲ್ಬಮ್ ಗೀತೆ ಬಿಡುಗಡೆ
ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ವೈವಿಧ್ಯ ಸಾಂಸ್ಕೃತಿಕ ಸಾಹಿತ್ಯಕ ಹಿರಿಮೆ ಸಾರುವಂತ ಅಪರೂಪದ ಅಲ್ಬಮ್ ಗೀತೆಯೊಂದು ಸೋಮವಾರ ಬಿಡುಗಡೆಗೊಂಡಿದೆ.
ಜಿಲ್ಲೆಯ ಭಾವ ಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಇರುವ ಗೀತೆಯನ್ನು ಸ್ವತಃ ಸುಗಮ ಸಂಗೀತ ಗಾಯಕರಾಗಿರುವ ಉಮೇಶ ಮುಂಡಳ್ಳಿ ಅವರೇ ಹಾಡಿರುತ್ತಾರೆ.
ಸದಾ ಹೊಸತನ ಹಾಗೂ ವೈವಿಧ್ಯತೆ ಯನ್ನು ಹುಡುಕುವ ಕವಿ ಮುಂಡಳ್ಳಿ ಅವರು ತಮ್ಮ ಮಗಳು ನಿನಾದಳ ಹುಟ್ಡಿದ ಹಬ್ಬದಂದು ವಿನೂತನ ರೀತಿಯಲ್ಲಿ ಮಗಳ ಕೈಯಿಂದಲೇ ಈ ವಿಶೇಷ ಗೀತೆಯನ್ನು ನಾಡಿನ ಜನತೆಗೆ ಅರ್ಪಿಸಿರುವುದು ವಿಶೇಷವಾಗಿದೆ.
ನಿನಾದಳ ಹುಟ್ಟಿದ ಹಬ್ಬದ ಆಚರಣೆಯಲ್ಲಿ ತಮ್ಮ ಮನೆಯಲ್ಲಿಯೇ ಅತ್ಯಂತ ಸರಳವಾಗಿ ಗೀತೆಯನ್ನು ತಮ್ಮ “ನಿನಾದ ” Umesh Mundalli ಯೂಟ್ಯೂಬ್ ಚಾನೆಲ್ ನ ಮೂಲಕ ಬಿಡುಗಡೆ ಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಮೇಶ ಮುಂಡಳ್ಳಿ ಅವರ ಜೊತೆ ಅವರ ಪತ್ನಿ ಲೇಖಕಿ ರೇಷ್ಮಾ ಉಮೇಶ ,ಮಕ್ಕಳಾದ ನಿನಾದ ಉತ್ಥಾನ ಇದ್ದರು.
ಈ ವಿಶೇಷ ಗೀತೆಗೆ ವಿನಾಯಕ ದೇವಾಡಿಗ ಕೊಳಲು ,ಆದಿತ್ಯ ದೇವಾಡಿಗ ತಬಲ ಹಾಗೂ ವಿಘ್ನೇಶ ಗೌಡ ಹೊನ್ನಾವರ ಇವರು ಕೀಬೋರ್ಡ್ ನಲ್ಲಿ ಸಹಕರಿಸಿರುತ್ತಾರೆ. ಜಿಲ್ಲೆಯ ಬಗ್ಗೆ ಅಭಿಮಾನ ಹೆಮ್ಮೆ ಪಡಬಹುದಾದಂತಹ ಈ ಗೀತೆಯನ್ನು ಎಲ್ಲರೂ ಕೇಳಿ ಮಾರ್ಗದರ್ಶನ ಹಾಗೂ ಆಶಿರ್ವಾದ ಮಾಡಿ ಎಂದು ಮುಂಡಳ್ಳಿ ಅವರು ಈ ಸಂದರ್ಭದಲ್ಲಿ ಕೇಳಿಕೊಂಡಿರುತ್ತಾರೆ.