ಭಟ್ಕಳದ್ದಲ್ಲಿ ಅಕ್ರಮ ಗೋ ಸಾಗಾಟ: ಅರೋಪಿಗಳ ಬಂಧನ
ಭಟ್ಕಳ: ಅಕ್ರಮವಾಗಿ ಎರಡು ಕೋಣಗಳನ್ನು ವಾಹನವೊಂದರಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕೋಣಗಳನ್ನು ರಕ್ಷಿಸಿದ ಘಟನೆ ಪುರವರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೊಲೀಸ್ ಚೆಕ್ಪೋಸ್ಟ್ ಬಳಿ ನಡೆದಿದೆ.
ಆರೋಪಿಗಳಾದ ಹಡೀಲ ಜೋಳದಮೂಲೆ ನಿವಾಸಿ ರಾಮ ಬಡ್ಕಾ ನಾಯ್ಕ (43) ಹಾಗೂ ಬೆಳಕೆ ಕಾನಮಡ್ಲು ನಿವಾಸಿ ರಾಮಚಂದ್ರ ಸುಬ್ಬ ನಾಯ್ಕ (42) ಅವರನ್ನು ಕೂಡಾ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ವಧೆ ಮಾಡುವ ಉದ್ದೇಶದಿಂದ ಅಂದಾಜು 50 ಸಾವಿರ ಮೌಲ್ಯದ ಎರಡು ಕೋಣಗಳನ್ನು ಮಹೀಂದ್ರಾ ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಬೈಂದೂರಿನಿಂದ ಭಟ್ಕಳ ಕಡೆಗೆ ಸಾಗಾಟ ಮಾಡುವಾಗ ಪುರವರ್ಗದ ರಾಷ್ಟ್ರೀಯ ಹೆದ್ದಾರಿಯ ಮೇಲಿರುವ ಪೊಲೀಸ್ ಚೆಕ್ಪೋಸ್ಟ್ ಬಳಿ ಪೊಲೀಸರು ವಾಹನ ಹಾಗೂ ಕೋಣಗಳನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಾನಂದ ನಾವದಗಿ ನೀಡಿದ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡು ತನಿಖೆ ಕೈ ಗೊಂಡಿದ್ದಾರೆ.