*ಮಂಕಾಳಣ್ಣ ರಿಗೆ ಮನುಷ್ಯತ್ವ ಇದೆಯೇ?* : *ಅನಂತಮೂರ್ತಿ ಹೆಗಡೆ*
*ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮತ್ತೆ ಸರ್ಕಾರಕ್ಕೆ ಆಗ್ರಹ*
*ಶಿರಸಿ*:- ಕಾಂಗ್ರೆಸ್ ಸರಕಾರಕ್ಕೆ ಜನರ ಸಾವು ತಮಾಷೆ ವಿಷಯವಾಗಿದೆ, ಹಿಂದಿನ ವಿಧಾನಸಭಾ ಚುನಾವಣೆ ಸಮಯದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕುಮಟಾಕ್ಕೆ ಬಂದು ಹೇಳುತ್ತಾರೆ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು, ಹಾಗೇಯೇ ಲೋಕಸಭಾ ಎಲೆಕ್ಷನ್ ಗೂ ಬಂದು ಹೇಳುತ್ತಾರೆ ಆಸ್ಪತ್ರೆ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ,
ಈಗ ಅದರ ಸುದ್ದಿನೇ ಇಲ್ಲ ,ನಮಗೆ ಗೊತ್ತಾಯಿತು ಕಾಂಗ್ರೆಸ್ ಸರಕಾರಕ್ಕೆ ಮನುಷ್ಯತ್ವ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಶಿರಸಿಯ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ನಾನು ವೈಯಕ್ತಿಕವಾಗಿ ಮಂಕಾಳ ವೈದ್ಯರನ್ನು ಬಹಳ ಗೌರವಿಸುತ್ತೇನೆ. ಇತ್ತೀಚೆಗೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದೇನೆ. ನಿಮ್ಮ ಆಯಸ್ಸು ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದೇನೆ. ಆದರೆ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಮಾತಾಡಲೇಬೇಕು ಅಲ್ಲವೇ ? ತಾವೇನು ಮಾಡುತ್ತಿದ್ದಿರಿ ?
ಸ್ವಂತ ಖರ್ಚಿನಿಂದ ಆಸ್ಪತ್ರೆ ಮಾಡುತ್ತೇನೆ ಎಂದು ಹೇಳಿದ ನೀವು , ಹೇಳುವುದು ಒಂದು , ಮಾಡುವುದು ಇನ್ನೊಂದು, ಒಂದು ವರ್ಷ ಆದರೂ ಆಸ್ಪತ್ರೆ ಸುದ್ದಿನೇ ಇಲ್ಲ ,
ಗೆದ್ದರೆ ಆಸ್ಪತ್ರೆ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು, ನಾನು ನಿಮ್ಮಲ್ಲಿ ಕೇಳಲು ಬಯಸುತ್ತೇನೆ. ಮಂಕಾಳನ್ನ ನಿಮಗೆ ಮನುಷ್ಯತ್ವ ಇಲ್ಲವೇ ? ಆಸ್ಪತ್ರೆ ನೀವು ಎಲೆಕ್ಷನ್ ಸರಕು ಮಾಡಿಕೊಡಿದ್ದೀರಲ್ಲ ? ಜನ ಮಂಗಳೂರು ಆಸ್ಪತ್ರೆಗೆ ಹೋಗುವುದನ್ನು ತಮಾಷೆ ಮಾಡುತ್ತಿದ್ದೀರಲ್ಲ? ಭಗವಂತ ನಿಮ್ಮನ್ನ ಕ್ಷಮಿಸುತ್ತಾನೆಯೇ ?
ಕ್ಯಾನ್ಸೆರ್ ಬಂದರೂ ಮಂಗಳೂರು , ಹುಬ್ಬಳ್ಳಿ ಹೋಗಬೇಕು, ಹಾರ್ಟ್ ಪ್ರೋಬ್ಲೋಮ್ ಬಂದರೂ ಮಂಗಳೂರು ಹೋಗಬೇಕು, ವಾಹನ ಅಪಘಾತ ಆಗಿ ತಲೆಗೆ ಪೆಟ್ಟು ಬಿದ್ದರೂ ಮಂಗಳೂರು ಹೋಗಬೇಕು, ತಮಗೆ ಎಷ್ಟು ಜನ ಅಮಾಯಕ ಮೀನುಗಾರರು ವಾಹನ ಅಪಘಾತದಲ್ಲಿ ಮಂಗಳೂರು ಹೋಗಬೇಕಾದರೆ ಮಾರ್ಗ ಮಧ್ಯದಲ್ಲಿ ಸಾವನ್ನೊಪ್ಪಿದ್ದಾರೆ ಎಂದು ಲೆಕ್ಕ ಇದೆಯೇ ?
ವಾಹನ ಅಪಘಾತ ಜೀವ ಕಳೆದುಕೊಂಡ ಕುಟುಂಬ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬ ಕಲ್ಪನೆ ಇದೆಯೇ ಮಂಕಾಳಣ್ಣ ? ಎಂದು ಪ್ರಶ್ನಿಸಿದರು.
ನೀವು ಹುಷಾರಿಲ್ಲ ಅಂದರೆ ಬೆಂಗಳೂರು ಮಂಗಳೂರು ಹೋಗುತ್ತೀರಿ, ಆದರೆ ಬಡವರು, ಕೂಲಿಕಾರರು , ಮೀನುಗಾರರು ಹುಷಾರಿಲ್ಲ ಅಂದರೆ ಎಲ್ಲಿ ಹೋಗಬೇಕು ?
ಇನ್ನು ಕಾಯಲು ಸಾಧ್ಯವಿಲ್ಲ , ತಾವು ಕೂಡಲೇ ಕುಮಟಾ ದಲ್ಲಿ ಹಿಂದೆ ಘೋಷಣೆ ಆಗಿದ್ದ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಬೇಕು , ಶಿರಸಿಯಲ್ಲಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , ಟ್ರಾಮಾ ಸೆಂಟರ್ ಘೋಷಣೆ ಆಗಬೇಕು , ಬೇಕಾದರೆ ಖಾಸಗಿ ಮತ್ತು ಸರಕಾರಿ ಪಾಲುದಾರಿಕೆಯಲ್ಲಿ ಮಾಡಬಹುದು , ಅದಕ್ಕಾಗಿ ಸಮೀತಿ ರಚನೆ ಮಾಡಿ ಇನ್ನು 45 ದಿನ ಸಮಯ ನೀಡುತ್ತೇನೆ ,ತಾವೇನೂ ಮಾಡಿಲ್ಲ ಅಂದರೆ ಉಪವಾಸ ಸತ್ಯಾಗ್ರಹ ನಿಮ್ಮ ಕಚೇರಿ ಮುಂದೆ ಮಾಡುತ್ತೇನೆ , ನನ್ನ ಜೀವ ಹೋದರು ಪರವಾಗಿಲ್ಲ ಒಳ್ಳೆ ಆಸ್ಪತ್ರೆ ಜಿಲ್ಲೆಗೆ ಆಗಲೇ ಬೇಕು.
ನಾನು ಕಾಂಗ್ರೆಸ್ ನಾಯಕರಲ್ಲಿ ಕೇಳಿಕೊಳ್ಳುತ್ತೇನೆ, ನಾನು ಸಚಿವರಲ್ಲಿ ಆಸ್ಫತ್ರೆ ಮೆಡಿಕಲ್ ಕಾಲೇಜು ಕೇಳಿದ್ದೇನೆ ಅಂತ ನಾಳೆಯಿಂದ ನನಗೆ ಬೈಯಲು ಬರಬೇಡಿ , ಆಸ್ಪತ್ರೆ ವಿಚಾರದಲ್ಲಿ ರಾಜಕೀಯ ಬೇಡ ಎಲ್ಲರೂ ಒಂದಾಗಿ ಹೋರಾಟ ಮಾಡೋಣ, ಪಕ್ಕದ ಮಂಗಳೂರಿಗರನ್ನ ನೋಡಿ ಕಲಿಯೋಣ, ಆಸ್ಪತ್ರೆ ಆದರೆ ನಮ್ಮೆಲ್ಲರ ಕುಟುಂಬಕ್ಕೆ ಒಳ್ಳೇದು ಅಲ್ಲವೇ ?
*ಜನರ ಆರೋಗ್ಯ ಆಯಸ್ಸು ನಿಮಗೆ ಕಸಕ್ಕಿಂತ ಕಡೆಯೇ ಮಂಕಾಳಣ್ಣ*
ಆಸ್ಪತ್ರೆಗೆ ಕೊಡಲು ಹಣ ಇಲ್ಲ , ಸಮುದ್ರದಲ್ಲಿ ಪ್ಲಾಸ್ಟಿಕ್ ಕುಡಿಸಲು ಹಣ ಇದೆಯೇ ?
ನೀವು ಹಣ ಮಾಡಲು 840 ಕೋಟಿ ರೂಪಾಯಿ ಖರ್ಚುಮಾಡಿ ಸಮುದ್ರ ಗುಡಿಸುತ್ತೇನೆ ಎಂದು ಹೇಳುತ್ತೀರಿ ?
ಜನರ ಆರೋಗ್ಯ ಆಯಸ್ಸು ನಿಮಗೆ ಕಸಕ್ಕಿಂತ ಕಡೆಯೇ ಮಂಕಾಳನ್ನ ?
ಹಿಂದಿನ ಸರಕಾರ ದಲ್ಲಿ 40 % ಕಮಿಷನ್ ಎನ್ನುತ್ತಿದ್ದ ನೀವು ಈಗ ಎಷ್ಟು ಪರಸೆಂಟ್ ಅಂತ ನಾವು ಕೇಳಬಹುದೇ ? ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯೆ ರೇಖಾ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಜಿಪಂ ಮಾಜಿ ಸದಸ್ಯೆ ಶೋಭಾ ನಾಯ್ಕ, ಶಿರಸಿ ನಗರ ಪ್ರಧಿಕಾರದ ಮಾಜಿ ಅಧ್ಯಕ್ಷ ನಂದನ ಸಾಗರ, ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ಹರಿಕಾಂತ ಉಪಸ್ಥಿತರಿದ್ದರು.