ಸಿರಸಿ – ಕುಮಟಾ ರಸ್ತೆ ಕಾಮಗಾರಿ – ನಿರ್ಲಕ್ಷಕ್ಕೆ ಆಕ್ಷೇಪಣೆ;
ಸಾರ್ವಜನಿಕ ಓಡಾಟಕ್ಕೆ ಸಮಸ್ಯೆ- ರವೀಂದ್ರ ನಾಯ್ಕ
ಶಿರಸಿ: ಸಾರ್ವಜನಿಕರಿಗೆ ಉತ್ತಮ ದರ್ಜೆಯ ರಸ್ತೆಗಾಗಿ ಕಾಮಗಾರಿ ಜರಗುತ್ತಿರುವ ಶಿರಸಿ-ಕುಮಟಾ ರಸ್ತೆ ವಾಹನ ಓಡಾಟಕ್ಕೆ ಉಂಟಾಗಿರುವ ಸಮಸ್ಯೆ ನಿಯಂತ್ರಿಸುವಲ್ಲಿನ ನಿರ್ಲಕ್ಷಕ್ಕೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕುಮಟದಿಂದ ಶಿರಸಿವರೆಗೂ, ಶಿರಸಿ ತಾಲೂಕಿನ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಕಾಮಗಾರಿ ಜರುಗಿದರೂ ಕುಮಟಾ ತಾಲೂಕಿನ ರಸ್ತೆ ಕಾಮಗಾರಿ ಮುಗಿಯದ ಹಾಗೂ ಹೊಸ ಸೇತುವೆ ಅಂಚಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಸ್ಥೆ ಆಗಿದೆ ಎಂದು ಪ್ರಸ್ತಾಪಿಸಿದ್ದಾರೆ.
ಆರಂಭದಲ್ಲಿ ಪರಿಸರ ಇಲಾಖೆಯ ಪರವಾಣಗಿ, ಉಚ್ಛ ನ್ಯಾಯಾಲಯದ ಮದ್ಯಂತರ ಆದೇಶ, ಬಗೆಹರಿಯುವ ಭೂಸ್ವಾಧೀನ ಪರಿಹಾರ ವಿತರಣೆ, ಟೆಂಡರ್ ಪ್ರಕ್ರಿಯೆಗೆ ವಿಳಂಬ ಮುಂತಾದ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದ ಕಾಮಗಾರಿ ವಿಳಂಬಕ್ಕೆ ಕಾರಣವಾಗಿತ್ತು ಎಂದು ಅವರು ಹೇಳಿದ್ದಾರೆ.
ನಿರಂತರ ಸಹಸ್ರಾರು ವಾಹನ ಓಡಾಡುವ ರಸ್ತೆಯಲ್ಲಿ ಹೊಂಡಗಳಿAದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವುದು ವಿಷಾದಕರ ಎಂದು ಅವರು ತಿಳಿಸಿದ್ದಾರೆ.
ಶೀಘ್ರ ಕ್ರಮ:
ಗಂಭೀರ ಸ್ವರೂಪದ ಅಪಘಾತ ಮತ್ತು ಸಾರ್ವನಿಕರ ಅನಾನೂಕುಲವನ್ನ ಪರಿಗಣಿಸಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸುವುದು ಅತಿಅವಶ್ಯವೆಂದು ರವೀಂದ್ರ ನಾಯ್ಕ ಹೇಳಿದ್ದಾರೆ.