*ನಿವೃತ್ತ ಹಾಗೂ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಂಕೋಲಾ ಘಟಕದಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ಬೀಳ್ಕೊಡುಗೆ ಸಮಾರಂಭ.*
ಅಂಕೋಲಾ : ರಸ್ತೆ ಸಾರಿಗೆ ನೌಕರರು ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರಿಗೆ ಗೌರವದಿಂದ ವರ್ತಿಸುವ ಮೂಲಕ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ನೀಡಿ ವಾ.ಕ.ರ.ಸಾ ಸಂಸ್ಥೆಯ ಅಂಕೋಲ ಘಟಕದಿಂದ ಕೆಲವು ಚಾಲಕ& ನಿರ್ವಾಹಕರು. ಸಂಚಾರ ನಿಯಂತ್ರಕರು ನಿವೃತ್ತಿ ಹೊಂದಿದ್ದು ಇನ್ನು ಕೆಲವರಿಗೆ ನಿರ್ವಾಹಕ ಹುದ್ದೆಯಿಂದ ಸಂಚಾರ ನಿಯಂತ್ರಕರಾಗಿ ಮುಂಬಡ್ತಿ ದೊರೆತಿದ್ದು. ಅಂತಹ ನೌಕರರಿಗೆ ವಾ.ಕ.ರ.ಸಾ ಅಂಕೋಲಾ ಘಟಕದ ಘಟಕ ವ್ಯವಸ್ಥಾಪಕಿ ಚೈತನ್ಯ
ಅಗಳಗಟ್ಟಿ ಹಾಗೂ ಸಂಸ್ಥೆಯ ನೌಕರ ವರ್ಗ ಆತ್ಮೀಯವಾಗಿ ಘಟಕದಲ್ಲಿ ಬಿಳ್ಕೊಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಘಟಕ ವ್ಯವಸ್ಥಾಪಕರು ಸಾರಿಗೆ ಸಂಸ್ಥೆಯ ಚಾಲಕ& ನಿರ್ವಾಹಕರು ಸಂಸ್ಥೆಯ ಆಸ್ತಿ ಇದ್ದಂತೆ.. ಇಷ್ಟು ವರ್ಷಗಳ ಕಾಲ ಸಾರ್ವಜನಿಕರೊಂದಿಗೆ ಬೆರೆತು ಪ್ರಾಮಾಣಿಕವಾಗಿ ತಾಳ್ಮೆಯಿಂದ ಕೆಲಸವನ್ನು ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರ ನಿವೃತ್ತಿಯ ಬದುಕು ನೆಮ್ಮದಿಯಿಂದ ಕೂಡಿರಲಿ. ನಿವೃತ್ತಿಯ ಬಳಿಕ ಅವರಿಗೆ ಸಂಸ್ಥೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಕಾನೂನಿನ ಚೌಕಟ್ಟಿಗೊಳಪಟ್ಟು ಪೂರೈಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ನಿರ್ವಾಹಕರಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ನಿರ್ವಾಹಕ ಹುದ್ದೆಯಿಂದ ಸಂಚಾರ ನಿಯಂತ್ರಕರಾಗಿ ಯಲ್ಲಾಪುರ ಮತ್ತು ಕುಮಟಾ ತಾಲೂಕಿಗೆ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ನೌಕರರನ್ನು ಕೂಡ ಆತ್ಮೀಯವಾಗಿ ಬಿಳ್ಕೊಟ್ಟು ಶುಭ ಹಾರೈಸಿದರು.
ಅಂಕೋಲ ಘಟಕದಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ನೌಕರರು.ಉಮೇಶ್ ನಾಯ್ಕ. ನಾಗೇಶ್ ನಾಯ್ಕ. ವಿಶ್ವನಾಥ ಆಗೇರ್. ಎನ್ ಎಚ್ ನಾಯ್ಕ್. ಪ್ರಕಾಶ್ ನಾಯ್ಕ ಮಂಜಗುಣಿ.
ಅಂಕೋಲಾ ಘಟಕದಿಂದ ಬೇರೆ ಬೇರೆ ತಾಲೂಕಿಗೆ ನಿರ್ವಾಹಕ ಹುದ್ದೆಯಿಂದ ಸಂಚಾರ ನಿಯಂತ್ರಕರಾಗಿ ಮುಂಬಡ್ತಿ ಪಡೆದ ನೌಕರರು.
ಶಾಂತ. ಯು. ನಾಯ್ಕ. ಮತ್ತು ಆರ್ ಡಿ ಸ್ವಾಮಿ ಇವರಿಗೆ ಸಂಚಾರ ನಿಯಂತ್ರಕರಾಗಿ ಯಲ್ಲಾಪುರ ವಾ. ಕ್. ರ. ಸಾ ಘಟಕಕ್ಕೆ ಮುಂಬಡ್ತಿ ನೀಡಲಾಗಿದೆ .
ನಾಗರಾಜ್ ನಾಯ್ಕ್. ಇವರಿಗೆ ಸಂಚಾರ ನಿಯಂತ್ರಕರಾಗಿ ಕುಮಟಾ ವಾ. ಕ್. ರ. ಸಾ ಘಟಕಕ್ಕೆ ಮುಂಬಡ್ತಿ ನೀಡಲಾಗಿದೆ .
ಸದರಿ ಬೀಳ್ಕೊಡುಗೆ ಸಮಾರಂಭದಲ್ಲಿ ಅಂಕೋಲ ಘಟಕದ ವ್ಯವಸ್ಥಾಪಕರು ಚೈತನ್ಯ ಅಗಳಗಟ್ಟಿ. ಮಂಜುನಾಥ ( AWS) ಶಿವಾನಂದ ನಾಯ್ಕ್ ಸಂಚಾರ ಅಧೀಕ್ಷಕರು. ರಾಜು ನಾಯಕ ಸಂಚಾರ ನಿಯಂತ್ರಕ. ಕಾರ್ಯಕ್ರಮದ ಮೇಲುಸ್ತುವಾರಿ ಅಧ್ಯಕ್ಷ ದಿಲೀಪ್ ನಾಯ್ಕ್. ಉಪಾಧ್ಯಕ್ಷದ ದೇವಣ್ಣ್ ನಾಯ್ಕ್. ಸಾಗರ. ಎಸ್ ನಾಯ್ಕ್ ಕಾರ್ಯದರ್ಶಿ. ಎಸ್ ಆರ್ ಬಂಟ್ ಸ್ವಾಗತಿಸಿದರು ಹಾಗೂ ಶಿವಕುಮಾರ್ ನಾಯಕ. ಎನ್ ಕೆ ಆಚಾರಿ ಹಾಗೂ ಇತರ ಅನೇಕ ಸಿಬ್ಬಂದಿಗಳು ಜೊತೆಗೆ ನಿವೃತ್ತಿ ಹೊಂದಿದ ನೌಕರರ ಕುಟುಂಬದವರು ಸದರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.