ಭಟ್ಕಳದಲ್ಲಿ ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆಯಿಂದ ರಾಜ್ಯ ಕಾರ್ಯದರ್ಶಿ ಜಿ.ಎನ್ .ರೇವಣಕರ ನೇತೃತ್ವದಲ್ಲಿ ಸಹಾಯಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ
ಭಟ್ಕಳ-ಇಂದು ಮಂಗಳವಾರ ಭಟ್ಕಳದಲ್ಲಿ (ಎ.ಐ.ಟಿ.ಯು.ಸಿ) ಕಾರ್ಮಿಕ ಸಂಘಟನೆಯಿಂದ ರಾಜ್ಯ ಕಾರ್ಯದರ್ಶಿ ಜಿ.ಎನ್ .ರೇವಣಕರ ನೇತೃತ್ವದಲ್ಲಿ ಮಾನ್ಯ ಸಹಾಯಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲ್ಲಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯ ತೀರ್ಮಾನದಂತೆ
ಕಾರ್ಮಿಕರಿಗೆ ಅವಶ್ಯಕತೆ ಇಲ್ಲದ ಹಲವಾರು ತರಹದ ಕಿಟ್ಟುಗಳು, ಕೋಟ್ಯಾಂತರ ಸಂಖ್ಯೆಯ ಕ್ಯಾಲೆಂಡರ್ ಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸುವ ಬದಲಾಗಿ 500 ಕೋಟಿಗಿಂತಲೂ ಹೆಚ್ಚು ಹಣ ಖಾಸಗಿ ಆಸ್ಪತ್ರೆಗಳಿಗೆ ವೈದ್ಯಕೀಯ ತಪಾಸಣೆಗೆ ನೀಡಿರುವ ನೀತಿಗಳಂತಹ ಕ್ರಮಗಳು ಮಂಡಳಿಯ ಹಣ ದುಂದು ವೆಚ್ಚಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ನಕಲಿ ಕಾರ್ಮಿಕರ ಗುರುತಿನ ಚೀಟಿಯು ರದ್ದುಪಡಿಸುವ ಅಭಿಯಾನದಲ್ಲಿ ನೈಜ ಕಾರ್ಮಿಕರ ಗುರುತಿನ ಚೀಟಿಯನ್ನು ರದ್ದುಪಡಿಸಿ ಸವಲತ್ತುಗಳು ತಡೆಹಿಡಿಯಲಾಗಿದೆ, ಮಕ್ಕಳ ಶೈಕ್ಷಣಿಕ ಧನಸಹಾಯ ಕಡಿತಗೊಳಿಸಿರುವುದು, ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸದೆ ಏಕ ಪಕ್ಷಿಯ ತೀರ್ಮಾನ ಮಾಡುತ್ತಿರುವುದು, ಕಾರ್ಮಿಕ ವಿರೋಧಿ ನೀತಿ ಆಗಿರುತ್ತದೆ,ಕಾರ್ಮಿಕರಿಗೆ ಅವಶ್ಯಕತೆ ಇಲ್ಲದ ಕಿಟ್ ಗಳನ್ನು ನೀಡುವುದನ್ನು ತಕ್ಷಣದಿಂದ ನಿಲ್ಲಿಸಬೇಕು, ಕರ್ನಾಟಕ ಹೈಕೋರ್ಟ್ ನೀಡಿರುವ ಕಿಟ್ ವಿತರಣೆಯ ತಡೆಯಾಜ್ಞೆಯನ್ನು ಸರ್ಕಾರ ಚಾಚು ತಪ್ಪದೇ ಪಾಲಿಸಬೇಕು,
ಈ ಹಿಂದೆ ಇದ್ದ ಶೈಕ್ಷಣಿಕ ಧನಸಹಾಯವನ್ನು ಮುಂದುವರಿಸುವುದು.ಭಟ್ಕಳ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ 2015 ರಿಂದ 2019 ರವರೆಗೆ ಮ್ಯಾನ್ವಲ್ ಮೂಲಕ ಸಲ್ಲಿಸಲಾಗಿರುವ ವೈದ್ಯಕೀಯ, ಮದುವೆ, ಹೆರಿಗೆ ಧನ ಸಹಾಯದ ಅರ್ಜಿಗಳು ಪರಿಶೀಲನೆ ಆಗಿ ಒಂಬತ್ತು ವರ್ಷ ಕಳೆದರೂ ಫಲಾನುಭವಿ ಖಾತೆಗೆ ಹಣ ಜಮಾ ಆಗದೆ ಬಾಕಿ ಇರುತ್ತದೆ ಈ ಅರ್ಜಿಯ ವಿಷಯವಾಗಿ ಹಿಂದಿನ ಸರ್ಕಾರದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯದಲ್ಲಿ ಮತ್ತು ಕಾರ್ಮಿಕ ಅದಾಲತ್ ನಲ್ಲಿ ದೂರು ಸಲ್ಲಿಕೆಯಾದರೂ ಫಲಾನುಭವಿಗೆ ಧನ ಸಹಾಯ ಜಮಾ ಆಗಲಿಲ್ಲ, ನೈಜ ಕಾರ್ಮಿಕರ ಗುರುತಿನ ಚೀಟಿಯು ರದ್ದು ಮಾಡಿರುವುದನ್ನು ಕೂಡಲೇ ಚಾಲ್ತಿ ಮಾಡಬೇಕು, ಕಲ್ಯಾಣ ಮಂಡಳಿಯ ತಂತ್ರಾಂಶದಲ್ಲಿ ಕಾರ್ಮಿಕ ಗುರುತಿನ ಚೀಟಿಯಲ್ಲಿರುವ ವಯಸ್ಸನ್ನೇ ಪರಿಗಣಿಸಿ ನವೀಕರಿಸುವ ಮತ್ತು ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಆಗಬೇಕು,
ಪಿಂಚಣಿ ಅರ್ಜಿ ಸಲ್ಲಿಸಲು 60 ವರ್ಷದ ನಂತರ ಯಾವುದೇ ಸಮಯದಲ್ಲೂ ಅರ್ಜಿ ಸಲ್ಲಿಸುವ ಅವಕಾಶ ನೀಡಬೇಕು. ಪಿಂಚಣಿ ಅರ್ಜಿ ಸಲ್ಲಿಸುವ ಫಲಾನುಭವಿಗೆ 11 ತಿಂಗಳ ನವೀಕರಣ ಬಾಕಿ ಇದ್ದರೂ ಸಹ ಅರ್ಜಿ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ನೀಡಬೇಕು. ಮಂಡಳಿಯ ತಂತ್ರಾಂಶದಲ್ಲಿ ಅರ್ಜಿ ಪರಿಶೀಲನೆ ದಿನಾಂಕ, ಮಂಜೂರಾತಿ ರವಾನೆ ಆಗಿರುವ ದಿನಾಂಕ ಯಾವುದೇ ಮಾಹಿತಿ ನಿಖರವಾಗಿರುವುದಿಲ್ಲ, ಸಂಪೂರ್ಣ ಮಾಹಿತಿ ತಂತ್ರಾಂಶದಲ್ಲಿ ನೋಡುವಂತಿರಬೇಕು ಮತ್ತು ಪ್ರಿಂಟ್ ಕಾಪಿ ಬರುವಂತಿರಬೇಕು, ಮುಂತಾದ ವಿಷಯಗಳನ್ನು ಒಳಗೊಂಡಂತೆ ಸಹಾಯಕ ಆಯುಕ್ತಕರ ಮುಖಾಂತರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ
ಜಿ .ಎನ್. ರೇವಣಕರ್. ಸುರೇಶ್ ನಾಗಪ್ಪಯ್ಯ ಆಚಾರಿ, ಗಜಾನನ ಸದಾಶಿವ ಆಚಾರಿ,ಸತೀಶ್ ವಾಸು ಮಡಿವಾಳ್. ಉಪಸ್ಥಿತರಿದ್ದರು.