ಕಾರವಾರ ಕೈಗಾ ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ ಕಡವಾಡ ವ್ಯಾಪ್ತಿಯಲ್ಲಿನ ನಂದವಾಳದಿಂದ ಮಾರುತಿ ದೇವಸ್ಥಾನದ ಕ್ರಾಸ್ ಬಳಿ ಭಾರಿ ಮಳೆ ಗಾಳಿಗೆ ರಸ್ತೆ ಮದ್ಯೆ ಬೀಳುವ ಸಾಧ್ಯತೆ ಇರುವ ತುಂಬಾ ಹಳೆಯದಾದ ಬೃಹದಾಕಾರದ ಮಾವಿನ ಮರಮತ್ತು ಹುಣಿಸೆ ಮರ
ಕಾರವಾರ. ಕಾರವಾರ ಕೈಗಾ ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ ಕಡವಾಡ ವ್ಯಾಪ್ತಿಯಲ್ಲಿನ ನಂದವಾಳದಿಂದ ಮಾರುತಿ ದೇವಸ್ಥಾನದ ಕ್ರಾಸ್ ವರೆಗಿನ ಎರಡು ಕಡೆ ತುಂಬಾ ಹಳೆಯದಾದ ಬೃಹತ ಎರಡು ಮಾವಿನ ಮತ್ತು ಒಂದು ಹುಣಿಸೆ ಮರಗಳು ಭಾರಿ ಮಳೆ ಗಾಳಿಗೆ ಮುಖ್ಯ ರಸ್ತೆ ಮೇಲೆ ಮುರಿದು ಬೀಳುವ ಹಂತದಲ್ಲಿದೆ. ಮತ್ತು ಈ ರಾಜ್ಯ ಹೆದ್ದಾರಿಯಾಗಿದ್ದರಿಂದ ಹಗಲು ರಾತ್ರಿ ಬಹಳಷ್ಟು ವಾಹನಗಳು ಸಂಚರಿಸುತ್ತವೆ. ಜನ ವಸತಿ ಪ್ರದೇಶವಾಗಿದ್ದುರಿಂದ ಪಾದಚಾರಿಗಳು ಓಡಾಡುವ ಜೊತೆಗೆ ಹತ್ತಿರದಲ್ಲೇ ಅಂಗನವಾಡಿ ಕೇಂದ್ರ ಕೂಡಾ ಇದೆ. ಒಂದು ವೇಳೆ ಭಾರಿ ಮಳೆ ಗಾಳಿಗೆ ಈ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದರೆ ದೊಡ್ಡ ದುರ್ಘಟನೆ ಸಂಭವಿಸಿದೆ. ಆದರೂ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆ ಗಮನ ಹರಿಸದಿರುವುದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ ರಾಜ್ಯ ಹೆದ್ದಾರಿಯಲ್ಲಿನ ಕಡವಾಡದಲ್ಲಿ ಈ ಹಳೆಯ ಮರಗಳು ಮುರಿದು ಬಿದ್ದು ಸಾವು ನೋವು ಸಂಭವಿಸಲಿ ಎಂದು ಕಾಯುತ್ತಿದ್ದಾರೆಯೇ ಎನ್ನುವಂತಾಗಿದೆ . ಇಲ್ಲಿಂದ ವಾಹನ ಸವಾರರು ಪಾದಚಾರಿಗಳು ಹಾಗೂ ಅಂಗನವಾಡಿ ಕೇಂದ್ರಕ್ಕೆ ಪುಟ್ಟ ಪುಟ್ಟ ಮಕ್ಕಳು ತೆರಳುವರು ಭಯಭೀತರಾಗಿ ಓಡಾಡುತ್ತಿದ್ದಾರೆ. ಒಂದು ವೇಳೆ ರಸ್ತೆ ಬದಿಯ ಹಳೆಯ ಮೂರು ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದರೆ ತಂತಿಗಳ ಸೆಳೆತಕ್ಕೆ ರಸ್ತೆಯುದ್ದಕೂ ಇರುವ ವಿದ್ಯುತ್ ಕಂಬಗಳಿಗೆ ಹಾನಿಯಾಗುವ ಜೊತೆ ಜೀವ ಹಾನಿ ಸಂಭವಿಸಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಸಹ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ವಾಹನ ಸವಾರರ ಸಾರ್ವಜನಿಕರ ಮತ್ತು ಅಂಗನವಾಡಿ ಕೇಂದ್ರದ ಪುಟ್ಟ ಪುಟ್ಟ ಮಕ್ಕಳ ಜೊತೆ ಪ್ರಾಣದ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯ ಹೆದ್ದಾರಿಯಲ್ಲಿನ ಕಡವಾಡ ಬಳಿ ರಸ್ತೆ ಬದಿಯ ಹಳೆಯ ಮೂರು ಮರವನ್ನು ಕಡಿದು ತೆರವು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಅವರು ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಕೆ ಅವರಿಗೆ ವಾಟ್ಸಾಪ್ ಮೂಲಕ ಮನವಿ ಸಲ್ಲಿಸಿದ್ದಾರೆ.