ಅಂಕೋಲಾ ಶಿರೂರು ಗುಡ್ಡ ಕುಸಿತ ದಲ್ಲಿ ನಾಪತ್ತೆಯಾದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ದೃಢಪಟ್ಟಿದೆ – ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
ಕಾರವಾರ:ಅಂಕೋಲಾ ದ ಶಿರೂರಿನ ಗುಡ್ಡಕುಸಿತ ದಲ್ಲಿ ನಾಪತ್ತೆಯಾದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.
ಮಾದ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡನ ಸಲಹೆಗಾರರು ,ನಿವೃತ್ತ ಮೇಜರ್ ಇಂದ್ರಬಾಲನ್ ಗಂಗಾವಳಿ ನದಿಯಲ್ಲಿನ ಅವಶೇಷಗಳ ಬಗ್ಗೆ ಅಡ್ವಾನ್ಸ್ಡ್ ಐ ಬೋರ್ಡ್ ಡ್ರೋಣ್ ಬಳಸಿ ಮಾಡಿದ ಅಧ್ಯಯನದ ವರದಿ ಬಂದಿದೆ.
ಈಗ ನದಿಯಾಳದಲ್ಲಿರುವ ಟ್ರಕ್ ತಲುಪುವುದು ಹೇಗೆ ಎಂಬ ಚಿಂತನೆ ನಡೆದಿದೆ .ನದಿಯಲ್ಲಿ ಬಿದ್ದ ಕಲ್ಲು ಮಣ್ಣಿನ ರಾಶಿ ಪಕ್ಕದಲ್ಲಿ ನಾಲ್ಕು ಅವಶೇಷಗಳಿವೆ . ನದಿಯ ದಡದಿಂದ 132 ಮೀಟರ್ ದೂರದಲ್ಲಿ ಟ್ರಕ್ ಇದೆ. ಅದರಲ್ಲಿ ಅರ್ಜುನ್ ಸಹ ಇರಬಹುದು. 165 ಮೀಟರ್ ದೂರದಲ್ಲಿ ಒಂದು ರೇಲಿಂಗ್ ಇದೆ. ಇವುಗಳನ್ನು ಮೇಲೆತ್ತಲು ನದಿಯ ನೀರಿನ ವೇಗ ಅಡ್ಡಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.