ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯರ ಆಶಯದಂತೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಕಟಗಾರಕೊಪ್ಪ ಗ್ರಾಮದ ಐನೊಳೆ ಅರಣ್ಯ ಪ್ರದೇಶದಲ್ಲಿ 1000 ಕ್ಕೂ ಹೆಚ್ಚು ಗಿಡ ನಾಟಿ
ಭಟ್ಕಳ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯರ ಆಶಯದಂತೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಕಟಗಾರಕೊಪ್ಪ ಗ್ರಾಮದ ಐನೊಳೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಾಗೂ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಹಯೋಗದೊಂದಿಗೆ ಪ್ರಗತಿಬಂಧು ಒಕ್ಕೂಟಗಳ ಸಹಕಾರದೊಂದಿಗೆ 1000 ಕ್ಕೂ ಹೆಚ್ಚು ಗಿಡ ನಾಟಿ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಗಣೇಶ ನಾಯ್ಕ ಅವರು ಮಾತನಾಡಿ ಪೂಜ್ಯ ಹೆಗ್ಗಡೆಯವರು ಈ ಕಾರ್ಯಕ್ರಮ ಪ್ರಾರಂಭಿಸಿದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಅರಣ್ಯೀಕರಣದ ಸದುದ್ದೇಶದಿಂದ ಕಳೆದ ಮೂರು ವರ್ಷದಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅರಣ್ಯ ಗಿಡಗಳ ನಾಟಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
.ಕಾರ್ಯಕ್ರಮದಲ್ಲಿ ಹಾಜರಿದ್ದ ಡೆಪ್ಯೂಟಿ RFO ಆದ ಜಗದೀಶ್ ನಾಯ್ಕ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೀಟ್ ಫಾರೆಸ್ಟ್ ಯೋಗೀಶ್ ರವರು ಉಪಸ್ಥಿತರಿದ್ದರು. ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಶ್ರೀಮತಿ ಜ್ಯೋತಿ ಆಚಾರಿ ಅವರು ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಭಾರತಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ವಿನೋದಾ ಬಾಲಚಂದ್ರರವರು ಎಲ್ಲರನ್ನ ಸ್ವಾಗತಿಸಿದರು. ತಾಲೂಕಿನ ಕೃಷಿಅಧಿಕಾರಿ ಮಹೇಶ ಹೆಗಡೆಯವರು ಎಲ್ಲರಿಗೂ ವಂದಿಸಿದರು. ಇವತ್ತಿನ ಗಿಡ ನಾಟಿ ಕಾರ್ಯಕ್ರಮದಲ್ಲಿ ವಿಪತ್ತು ಘಟಕಪ್ರತಿನಿಧಿಯವರು, ಸ್ವಯಂಸೇವಕರು, ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು, ಊರ ನಾಗರಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸಾವಿರಕ್ಕೂ ಹೆಚ್ಚು ಗಿಡ ನಾಟಿ ಮಾಡಿ ಸಂತಸ ವ್ಯಕ್ತಪಡಿಸಿದರು.