ಜೀವಿತ ಅವಧಿಯಲ್ಲಿ ಅರಣ್ಯ ಭೂಮಿ ಹಕ್ಕು ವಿತರಣೆ ನೋಡುವ ಆಸೆ- ಹಿರಿಯ ಸಾಮಾಜಿಕ ಹೋರಾಟಗಾರ ಕಾಗೋಡ ತಿಮ್ಮಪ್ಪ
ಶಿರಸಿ: ಭೂಮಿ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವು ತಾತ್ವಿಕ ಹಂತಕ್ಕೆ ತಲುಪಿದ್ದು, ಜೀವಿತ ಅವಧಿಯಲ್ಲೇ ಭೂಮಿ ಹಕ್ಕು ವಿತರಣೆ ನೋಡುವ ಆಶೆ ಬರಲಿ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಕಾಗೋಡ ತಿಮ್ಮಪ್ಪ ಅವರು ಆಶಯ ವ್ಯಕ್ತಪಡಿಸಿದರು.ಅವರು ಶುಕ್ರವಾರ ಇಂದು ಸಾಗರ ತಾಲೂಕಿನ ಅವರ ಗೃಹ ಕಛೇರಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ದಶಲಕ್ಷ ಗಿಡ ನೇಡುವ ಅಭಿಯಾನದ ಲಾಂಛನ ಪ್ರದರ್ಶಿಸುವ ಸಂದರ್ಭದಲ್ಲಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು
ಅರಣ್ಯವಾಸಿಗಳೇ ಪರಿಸರ ಜಾಗೃತಿ ಅಂಗವಾಗಿ ೧೦ ಲಕ್ಷ ಗಿಡನೇಡುವ ಕಾರ್ಯವು ದೇಶಕ್ಕೆ ಮಾದರಿಯಾಗಿದ್ದು, ಅರಣ್ಯ ಉಳಿಸಿ- ಅರಣ್ಯ ಅವಲಂಬಿತರಿಗೆ ಭೂಮಿಹಕ್ಕು ನೀಡುವದು ಸರಕಾರದ ಜವಾಬ್ದಾರಿ ಎಂದು ಹೇಳಿ, ಅರಣ್ಯವಾಸಿಗಳು ಗಿಡನೇಡುವ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ ನೀಡಿದರು ಅಲ್ಲದೇ, ದಶ ಲಕ್ಷ ಗಿಡ ನೇಡುವ ಅಭಿಯಾನಕ್ಕೆ ಶುಭಕೋರಿ ಕಾಗೋಡು ತಿಮ್ಮಪ್ಪ ಅವರು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರಿಗೆ ಸಾಕೇತಿಕವಾಗಿ ಗಿಡ ನೀಡಿದರು.
ಹೋರಾಟಗಾರ ಮುಂದಿನ ರೂಪರೇಷೆಯನ್ನು ಅಧ್ಯಕ್ಷ ರವೀಂದ್ರ ನಾಯ್ಕ ವಿಶ್ಲೇಷಿಸಿದರು.ಈ ಸಂದರ್ಭದಲ್ಲಿ ಚರ್ಚೆಯಲ್ಲಿ ರೈತ ಮುಖಂಡ ವೀರಭದ್ರ ನಾಯ್ಕ, ರಾಘವೇಂದ್ರ ನಾಯ್ಕ, ಕಾವಂಚೂರು ತಮ್ಮ ಸಲಹೆ ನೀಡಿದರು.
ಹೋರಾಟ ಜಾಗೃತಗೊಳಿಸಿ:
ಮೂರು ದಶಕದಿಂದ ನಿರಂತರ ಅರಣ್ಯ ಭೂಮಿ ಹಕ್ಕಿನ ಹೋರಾಟ ಶ್ಲಾಘನೀಯ. ಭೂಮಿ ಹಕ್ಕು ಸಿಗುವರೆಗೂ ಜಾಗೃತ ಹೋರಾಟ ಮುಂದುವರೆಸಿ. ಜೀವಿತ ಅವಧಿಯವರೆಗೂ ನಿಮ್ಮೊಂದಿಗೆ ಇರುವೆ ಎಂದು ಕಾಗೋಡು ತಿಮ್ಮಪ್ಪ ಅವರು ಹೇಳಿದರು.
ದಶಲಕ್ಷ ಗಿಡನೇಡುವ ಅಭಿಯಾನ ಲಾಂಛನವನ್ನು ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪ ಪ್ರದರ್ಶನ ಮಾಡಿರುವದು. ಅಧ್ಯಕ್ಷ ರವೀಂದ್ರ ನಾಯ್ಕ, ರೈತ ಮುಖಂಡರಾದ ವೀರಭದ್ರ ನಾಯ್ಕ, ರಾಘವೇಂದ್ರ ನಾಯ್ಕ ಇದ್ದರು.