ಶಿರಸಿ: ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಆಶ್ರಯದಲ್ಲಿ ಅಗಸ್ಟ ೧೭ ಶನಿವಾರ ಮುಂಜಾನೆ ೧೦ ಘಂಟೆಗೆ ಶಿರಸಿಯ ಅಂಬೇಡ್ಕರ ಭವನದಲ್ಲಿ ಕುಂಬ್ರಿ ಮರಾಠಿ “ಮೀಸಲಾತಿಗೆ ಎರಡು ದಶಕ’’ – ಒಂದು ವಿಶ್ಲೇಷಣಾ ಕಾರ್ಯಕ್ರಮವನ್ನು ಸಂಘಟಿಸಲು ತಿರ್ಮಾನಿಸಲಾಗಿದೆ ಎಂದು ವೇದಿಕೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ .
ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ, ಕರ‍್ಯಾಲಯದಲ್ಲಿ ಇಂದು ಜರುಗಿದ ವೇದಿಕೆಯ ಕರ‍್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.ಸಾಂಘಿತ ಮತ್ತು ಕಾನೂನಾತ್ಮಕ ಹೋರಾಟದ ಹಿನ್ನಲೆಯಲ್ಲಿ ಕುಂಬ್ರಿ ಮರಾಠಿ ಸಮಾಜಕ್ಕೆ ಅತೀ ಹೀಂದುಳಿದ ಪಟ್ಟಿಗೆ ಅಂದಿನ ಮುಖ್ಯಮಂತ್ರಿ ಎಸ್ .ಎಮ್ ಕೃಷ್ಣ ಮತ್ತು ಸಮಾಜ ಕಲ್ಯಾಣ ಸಚಿವ ಕಾಗೊಡ್ ತಿಮ್ಮಪ್ಪರವರ ಮುತುವರ್ಜಿಯಲ್ಲಿ ಸಚಿವ ಸಂಪುಟದ ತಿರ್ಮಾನದಂತೆ ಜನವರಿ ೨೦೦೧ರ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಂಡು ರಾಜ್ಯಪತ್ರದಲ್ಲಿ ಪ್ರಕಟಗೊಂಡಿತು. ಮಿಸಲಾತಿ ಪಟ್ಟಿ ಸೇರ್ಪಡೆಗೆ ಪ್ರೋಫೇಸರ್ ರವಿವರ್ನ ಕುಮಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋÃಗದ ಮುಂದೆ ಹೋರಾಟಗಾರರ ರವಿಂದ್ರ ನಾಯ್ಕ ವಾದ ಮಂಡಿಸಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಮುಂದಿನ ಸಮಾಜದ ಸೌಲಬ್ಯದ ಕುರಿತು ವೀಶ್ಲೇಷಣಾತ್ಮಕವಾಗಿ ಚರ್ಚಿಸುವ ಉದ್ಧೇಶದಿಂದ ಅ.೧೭ ರ ಸಭೆ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿರಿಯ ದುರೀಣರಾದ ದೇವರಾಜ ಮರಾಠಿ ಬಂಡಲ್ , ಕಿರಣ ಮರಾಠಿ ದೇವನಳ್ಳಿ, ನಾಗರಾಜ ಮರಾಠಿ ಕೊಡಿಗದ್ದೆ, ರಮೇಶ ಮರಾಠಿ ಮೊಗದ್ದೆ, ಕೇಶವ ಮರಾಠಿ, ಶ್ರೀಕಾಂತ ಮರಾಠಿ, ಕೃಷ್ಣ ಮರಾಠಿ, ತಿಮ್ಮ ಮರಾಠಿ ಅನುಗುಣಿ, ಗಣೇಶ ಮರಾಠಿ, ಭೀಮಸೀ ವಾಲ್ಮೀಕಿ, ಬಾಬು ಮರಾಠಿ ಬಂಡಲ್. ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ತಿರ್ಮಾನ :
ಸಮಾಜದ ಅಭಿವೃದ್ದೀ ದಿಸೆಯಲ್ಲಿ ಆಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.