ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳಕೆ ವತಿಯಿಂದ ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣ
ಭಟ್ಕಳ-ಬೆಳಕೇ ಗ್ರಾಮದ ಸಾರ್ವಜನಿಕರು ಹಾಗೂ ಬ್ಯಾಂಕಿನ ಷೇರುದಾರರ ಬಹು ವರ್ಷಗಳ ಬೇಡಿಕೆಯಾಗಿರುವ ಸಾರ್ವಜನಿಕ ಬಸ್ಸು ತಂಗುದಾಣವನ್ನು ಬೆಳಕೆಯಲ್ಲಿ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ಬೆಳಕೆ ವತಿಯಿಂದ ನಿರ್ಮಿಸಿ ಆಗಸ್ಟ್ 15 ರಂದು ಬ್ಯಾಂಕಿನ ಅಧ್ಯಕ್ಷರಾದ ಮಾದೇವ ನಾಯ್ಕ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಪಾಂಡು ನಾಯ್ಕ ,ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ, ದಾಮೋದರ ನಾಯ್ಕ,ಲೋಕೇಶ್ ನಾಯ್ಕ,ಮಂಜು ಮೊಗೇರ, ಭಾಸ್ಕರ ಗೊಂಡ, ರವಿರಾಜ್ ಜೈನ್,ಲಲಿತಾ ನಾಯ್ಕ, ಭಾರತಿ ನಾಯ್ಕ, ನಾಗೇಶ್ ನಾಯ್ಕ, ಶಾರದಾ ನಾಯ್ಕ,ಪ್ರಧಾನ ವ್ಯವಸ್ಥಾಪಕರಾದ ಅಣ್ಣಪ್ಪ ನಾಯ್ಕ,ಗ್ರಾಮ ಪಂಚಾಯತ ಅಧ್ಯಕ್ಷರಾದ ಜಗದೀಶ ನಾಯ್ಕ, ಬ್ಯಾಂಕಿನ ಷೇರುದಾರರು, ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ,ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು.