ಉತ್ತರ ಕನ್ನಡ ಜಿಲ್ಲಾದ್ಯಂತ ಸಾಮಾಜಿಕ ಜಾಗೃತ ಕಾರ್ಯಕ್ರಮಕ್ಕೆ ಮಾನವ ಬಂಧು ವೇದಿಕೆಯಿಂದ ನಿರ್ಧಾರ – ಎ.ಬಿ.ರಾಮಚಂದ್ರಪ್ಪ.
ಶಿರಸಿ : ಸಾಮಾಜಿಕ, ಶೋಷಣೆಗೆ ಒಳಗಾದ ವರ್ಗಗಳಿಗೆ ಜಾಗೃತೆ ಮೂಡಿಸುವುದು ಮತ್ತು ಆರ್ಥಿಕ ಸಬಲೀಕರಣ, ಮೂಡ ನಂಬಿಕೆ ವಿರೋಧ ತಿಳುವಳಿಕೆ ಮೂಡಿಸುವ ಕರ್ಯವನ್ನ ಮಾನವ ಬಂಧು ವೇದಿಕೆ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲಾದ್ಯಂತ ವ್ಯಾಪಕ ಪ್ರಗತಿಪರ ಚಿಂತನೆಯೊAದಿಗೆ ಕಾರ್ಯ ನಿರ್ವಹಿಸುತ್ತದೆ ಎಂದು ರಾಜ್ಯ ಮಾನವ ಬಂದು ವೇದಿಕೆಯ ರಾಜ್ಯ ಸಂಚಾಲಕ ಫ್ರೋ. ಎ ಬಿ ರಾಮಚಂದ್ರಪ್ಪ ಹೇಳಿದರು.ಅವರು ಶನಿವಾರ ಉತ್ತರ ಕನ್ನಡ ಜಿಲ್ಲೆಯ ಮಾನವ ಬಂದು ವೇದಿಕೆಯ ಸಂಘಟನೆಯ ಪೂರ್ವ ಬಾವಿ ಸಭೆಯಲ್ಲಿ ವೇದಿಕೆಯ ಕರ್ಯಕರ್ತರನ್ನ ಅಂಬೇಡ್ಕರ ಭವನದಲ್ಲಿ ಉಧ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಸಭೆಯಲ್ಲಿ ಸ್ವಾಗತವನ್ನು ಹೋರಾಟಗಾರ ರವೀಂದ್ರ ನಾಯ್ಕ ನಿರ್ವಹಿಸಿದ್ದರು, ಪ್ರಸ್ತಾಪಿಕ ಭಾಷಣ ವೇದಿಕೆಯ ಬೆಳಗಾವ್ ವಿಭಾಗದ ಸಂಚಾಲಕ ತೋಳಿ ಬರ್ಮಾಣ್ಣರವರು ಮಾಡಿದರು.ಸಭೆಯಲ್ಲಿ ವಿವಿಧ ಜಿಲ್ಲೆಯಿಂದ ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ನೆಹರು ನಾಯ್ಕ ಕಂಡ್ರಾಜಿ , ಎಮ್. ಆರ್ ನಾಯ್ಕ, ರಾಘವೇಂದ್ರ ನಾಯ್ಕ ಕವಂಚೂರು, ಮಾಬ್ಲೇಶ್ವರ್ ನಾಯ್ಕ ಬೆಡ್ಕಣಿ, ಕರಿಯಾ ಬೋಮ್ಮ ಗೌಡ, ಮಂಜುನಾಥ ಮರಾಠಿ, ನಾಗರಾಜ ಮರಾಠಿ ಮುಂತಾದವರು ಉಪಸ್ಥಿತರಿದ್ದರು.