ಕುಂಬ್ರಿ ಮರಾಠಿ ವೀಶ್ಲೇ಼ಷಣಾ ಸಭೆ :ರಾಜಕೀಯ ಮೀಸಲಾತಿ ಮೂರು ತಿಂಗಳಲ್ಲಿ ಘೋಷಿಸಿ – ನಿರ್ಣಯ
ಶಿರಸಿ : ರಾಜಕೀಯ ಮೀಸಲಾತಿ ಮುಂದಿನ ಮೂರು ತಿಂಗಳಲ್ಲಿ ಘೋಷಿಸಿ, ಇಲ್ಲದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಕುಂಬ್ರಿ ಮರಾಠಿ ಸಮಾಜದ ಸಭೆಯಲ್ಲಿ ನಿರ್ಣಯಿಸಲಾಯಿತು.ಶಿರಸಿಯ ಅಂಬೇಡ್ಕರ ಸಭಾ ಭವನದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜರುಗಿದ “ಕುಂಬ್ರಿ ಮರಾಠಿ ಮೀಸಲಾತಿ ಎರಡು ದಶಕ’’ ವೀಶ್ಲೇಷಣೆಯ ಕಾರ್ಯಕ್ರಮದಲ್ಲಿ ಮೇಲಿನ ನಿರ್ಣಯವು ಸೇರಿ ಪ್ರಮುಖ ೫ ನಿರ್ಣಯವನ್ನು ತೆಗುದುಕೊಳ್ಳಲಾಯಿತು.
ಮರಾಠಿ ನಿಗಮ ವ್ಯಾಪ್ತಿಯಲ್ಲಿ ಕುಂಬ್ರಿ ಮರಾಠಿ ಸಮಾಜ ಸೇರ್ಪಡಿಸುವುದು, ಪರಿಶಷ್ಟ ಪಂಗಡಕ್ಕೆ ಪರಿಗಣಿಸುವುದು, ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಹಕ್ಕು ನೀಡುವುದು ಮತ್ತು ನಾಟೀ ವ್ಯದ್ಯಪದ್ದತಿಗೆ ಪ್ರೋತ್ಸಾಹಿಸುವುದು ಇನ್ನಿತರ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು .
ಸಭೆಯಲ್ಲಿ ರಾಜ್ಯ ಮಾನವ ಬಂದು ವೇದಿಕೆಯ ಸಂಯೋಜಕ ಪ್ರೋ.ಎ ಬಿ ರಾಮಚಂದ್ರಪ್ಪ, ರಾಜ್ಯ ಸಂಚಾಲಕರು, ರಾಜ್ಯ ಮಾನವ ಬಂದು ವೇದಿಕೆ, ಬೆಂಗಳೂರು, ವಿಭಾಗ ಸಂಯೋಜಕ ತೋಳಿ ಬರ್ಮಾಣ್ಣ, ಸಹ ಸಂಚಾಲಕರು, ರಾಜ್ಯ ಮಾನವ ಬಂದು ವೇದಿಕೆ, ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ದಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ, ಗೌರವ ಅಧ್ಯಕ್ಷ ದೇವರಾಜ ಮರಾಠಿ ಮಾತನಾಡಿದರು. ಮೀಸಲಾತಿ ಪೂರ್ವ ಸಂಘಟನೆ ಮತ್ತು ಕಾನೂನು ಹೊರಾಟ, ಮೀಸಲಾತಿ ನಂತರ ಎರಡು ದಶಕದ ಚಿಂತನೆ ಮತ್ತು ಸಮಾಜದ ಮುಂದಿರುವ ಮುಂದಿನ ಸಮಸ್ಯೆಗಳು ಎಂಬ ವಿಷಯಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಸ್ವಾಗತ ಕುಮಾರಿ ಹೇಮಾ ಸುರೇಶ ಮರಾಠಿ ಕಾನಸೂರು, ಪ್ರಾರ್ಥನೆ ಕುಮಾರಿ ಅಶ್ವಿನಿ ಮರಾಠಿ, ಪ್ರಸ್ತಾವನೆ ಓಮು.ಡಿ ಮರಾಠಿ ಪಡಂಬೈಲ್ ಶಿರಸಿ, ವಂದನಾರ್ಪಣೆ ಉಮಾ ಮರಾಠಿ ಮಾಡಿದರು. ವೇದಿಕೆಯ ಮೇಲೆ ಹಿಂದುಳಿದ ವೇದಿಕೆಯ ಅಧ್ಯಕ್ಷರಾದ ರವೀಂದ್ರ ನಾಯ್ಕ ಶಿರಸಿ, ಗಣಪತಿ ದೇವು ಮರಾಠಿ, ದೇವರಾಜ ಮರಾಠಿ ಬಂಡಲ್, ಮಂಜುನಾಥ ಮರಾಠಿ ನಾಗೂರು, ಎ.ಬಿ ರಾಮಚಂದ್ರಪ್ಪ , ತೋಳಿ ಬರ್ಬಣ್ಣ, ವಿಶ್ವಾನಾಥ ಮರಾಠಿ, ಪುರುಷೋತ್ತಮ್ ಮರಾಠಿ, ರುಕ್ಮಾ ಮರಾಠಿ ,ಉಮಾ ಗಣಪತಿ ಮರಾಠಿ, ಲಕ್ಷö್ಮಣ ಶೇಷ ಮರಾಠಿ , ಶಿವಾನಂದ ಮರಾಠಿ ಉಪಸ್ಥಿತರಿದ್ದರು.ಮೀಸಲಾತಿಗೆ ಸಹಕರಿಸಿದ ಹಿಂದುಳಿದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕರವರಿಗೆ ಈ ಸಭೆಯಲ್ಲಿ ಸನ್ಮಾನಿಸಲಾಯಿತು.
ಹೋರಾಟಕ್ಕೆ ದ್ವನಿ ನೀಡಿದ್ದೇನೆ – ರವೀಂದ್ರ ನಾಯ್ಕ
ಕಳೆದ ನಾಲ್ಕು ದಶಕದಿಂದ ಜಿಲ್ಲೆಯ ಸಾಮಾಜಿಕ ಸಂಘಟನೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಹೋರಾಟಕ್ಕೆ ದ್ವನಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಹೋರಾಟದ ನಡೆ ತೃಪ್ತಿ ತಂದಿದೆಎAದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು.
ಕಳೆದ ನಾಲ್ಕು ದಶಕದಿಂದ ಜಿಲ್ಲೆಯಲ್ಲಿ ಮೀಸಲಾತಿ ವಂಚಿತ ಸಮಾಜಕ್ಕೆ ನ್ಯಾಯ, ಅರಣ್ಯ ಭೂಮಿ ಹಕ್ಕು ಹೋರಾಟ, ಮಧ್ಯಪಾನ ವೀರೋಧ ಜಾಗೃತಿ ಮತ್ತು ಸಾಮಾಜಿಕ ಜಾಗೃತ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಿದ್ದು ಹೋರಾಟದ ವಿವಿಧ ಮಾಜಲುಗಳು ಅಂತ ಅವರು ಹೇಳಿದರು. ಹೋರಾಟಕ್ಕೆ ಸ್ಪಂದಿಸುವ ಮನೋಭಾವನೆಯ ಜನಪ್ರತಿನಿಧಿಗಳು ಕ್ಷೀಣಿಸುತ್ತಿರುವುದು ವಿಷಾದಕರ ಅಂತ ಅವರು ಹೇಳಿದರು .