ಭಟ್ಕಳ ತಾಲೂಕು ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಅಗಸ್ಟ ೨೫ ರಂದು ನಾರಾಯಣ ಗುರು ಜಯಂತಿ ಆಚರಣೆ – ಪಿ.ಯು ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜನೆ
ಭಟ್ಕಳ: ಭಟ್ಕಳ ತಾಲೂಕು ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಟ್ಕಳದ ಕರಿಕಲ್ ನಲ್ಲಿರುವ ಧ್ಯಾನ ಮಂದಿರದಲ್ಲಿ ಆಗಸ್ಟ ೨೫ ನೇ ತಾರೀಖಿನಂದು ನಾರಾಯಣಗುರು ಜಯಂತ್ಯುತ್ಸವವು ಪರಮಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಭಟ್ಕಳ ತಾಲೂಕಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ “ಸಾಮಾಜಿಕ ಪರಿವರ್ತನೆಯಲ್ಲಿ ನಾರಾಯಣ ಗುರುಗಳ ಚಿಂತನೆ” ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯು ಆಗಸ್ಟ್ ೨೪ ರಂದು ಶನಿವಾರ ನಗರದ ವಿದ್ಯಾಭಾರತಿ ಹೈಸ್ಕೂಲ್ ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯಲ್ಲಿದ್ದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಗಸ್ಟ್ ೨೩ ನೇ ತಾರೀಖಿನ ಶುಕ್ರವಾರ ಸಾಯಂಕಾಲ ೫ ಗಂಟೆಯ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಲು ಕೋರಲಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಆಗಸ್ಟ್ ೨೫ನೇ ತಾರೀಕಿನಂದು ಕರಿ ಕಲನ ಧ್ಯಾನಮಂದಿರದಲ್ಲಿ ನಡೆಯುವ ನಾರಾಯಣ ಗುರು ಜಯಂತ್ಯುತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ನೀಡಲಾಗುವುದು. ಪ್ರತಿ ಕಾಲೇಜಿನಿಂದ ಗರಿಷ್ಠ ಮೂರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು ೫ ನಿಮಿಷಗಳ ಕಾಲಮಿತಿಯಲ್ಲಿ ವಿದ್ಯಾರ್ಥಿಗಳು ಭಾಷಣವನ್ನು ಪ್ರಸ್ತುತಪಡಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೂಲಕ ಹೆಸರನ್ನು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ
ಮನಮೋಹನ್ ನಾಯ್ಕ್ ಸಂಚಾಲಕರು ನಾರಾಯಣಗುರು ಜಯಂತ್ಯುತ್ಸವ ಸಮಿತಿ
ದೂರವಾಣಿ : ೯೯೮೦೪೩೧೯೮೭
ಶ್ರೀ ಗಂಗಾಧರ ನಾಯ್ಕ, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ತಾಲೂಕು ಘಟಕ
೮೩೧೦೦೯೩೧೯೮
ಶ್ರೀ ಭವಾನಿ ಶಂಕರ್ ನಾಯ್ಕ, ಉಪಾಧ್ಯಕ್ಷರು ಸ್ಪಂದನ ಸಂಸ್ಥೆ. ೯೯೭೨೨೮೨೯೨೩
ಶ್ರೀ ಪಾಂಡುರಂಗ ನಾಯ್ಕ ಕಾರ್ಯದರ್ಶಿಗಳು ಸ್ಪಂದನ ಸಂಸ್ಥೆ
೯೧೪೧೬೨೯೮೬೧ ಇವರುಗಳನ್ನು ಸಂಪರ್ಕಿಸಬಹುದೆಂದು ಸಂಘಟಕರು ಕೋರಿದ್ದಾರೆ.