ಭಟ್ಕಳ-ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘದಿಂದ ಕಾರು ಪಾರ್ಕಿಂಗ್ ಜಾಗದ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಭಟ್ಕಳದ ಡಿವೈಎಸ್ಪಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಭಟ್ಕಳದ ಲ್ಲಿ ಸುಮಾರು 260 ಟೂರಿಸ್ಟ್ ಗಾಡಿಯ ಚಾಲಕರು ಕಳೆದ 40 ವರ್ಷಗಳಿಂದ ಈ ಬಾಡಿಗೆ ಟೂರಿಸ್ಟ್ ಕಾರು ವಾಹನ ಚಾಲನೆ ವೃತ್ತಿ ಮಾಡಿ ಕೊಂಡಿದ್ದು ಸರಕಾರಕ್ಕೆ ಬಾಡಿಗೆ ಟ್ಯಾಕ್ ಕಟ್ಟಿಕೊಂಡು ಜಿವನ ನಡೆಸುತ್ತಿದ್ದು, ಭಟ್ಕಳ್ ಕೆ.ಎಸ್. ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಎದುರುಗಡೆ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿಕೊಂಡಿದ್ದೇವೆ. ಈಗ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳ ಬಸ್ ಸ್ಟ್ಯಾಂಡ್ ಎದುರುಗಡೆ ಕಾರು ಪಾರ್ಕಿಂಗ್ ಮಾಡಲು ಉಂಟಾಗಿರುವ ಜಾಗದ ಸಮಸ್ಯೆಯನ್ನು ಸರಿಯಾಗಿ ಮನಗೊಂಡು ಭಟ್ಕಳ ಬಸ್ ಸ್ಟ್ಯಾಂಡ್ ಎದುರುಗಡೆಯೇ ಜಾಗದಲ್ಲಿ ಪಾರ್ಕಿಂಗ್ ಕಾರು ಮಾಡಲು ನಮಗೆ ಸ್ಥಳಾವಕಾಶವನ್ನು ಮಾಡಕೊಡಬೇಕೆಂದು ಕೋರಿ ಭಟ್ಕಳ ಡಿವೈಎಸ್ಪಿ ಅವರಿಗೆ ಸಮಸ್ಯೆ ಮನವರಿಗೆ ಮಾಡಿ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗಣೇಶ್ ದೇವಾಡಿಗ,ಕಾರ್ಯದರ್ಶಿಯವರಾದ ಸೂರ್ಯಕಾಂತ್ ನಾಯ್ಕ್, ನಾರಾಯಣ್ ನಾಯಕ್, ಇಲ್ಯಾಸ್ ಎಸ್ ಬಿ ಅಬು ಮೊಹಮ್ಮದ್, ಶ್ರೀನಿವಾಸ್ ಮುಂತಾದ ವರಿದ್ದರು. ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಡಿವೈಎಸ್ಪಿ ಅವರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.