ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ದಾಡೆಲಿ ಸಿಪಿಐ ಅವರ ನಡೆಗೆ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಖಂಡನೆ- ದಾಂಡೇಲಿ ಸಿಪಿಐ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಸ್.ಪಿ ಗೆ ಆಗ್ರಹ
ಕಾರವಾರ: ದಾಂಡೇಲಿ ನಗರದ ಅಂಬೇವಾಡಿಯ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 400 ವಿದ್ಯಾರ್ಥಿಗಳ ಜೊತೆಗೆ ದುರ್ವರ್ತನೆ ತೋರಿದ ಪ್ರಾಚಾರ್ಯ ವಿಶ್ವನಾಥ ಹುಲಸದಾರ ವಿರುದ್ಧ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ವರದಿ ಮಾಡಲು ಅಲ್ಲಿಗೆ ತೆರಳಿದ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ದಾಂಡೇಲಿ ಸಿಪಿಐ ಅವರ ನಡೆಯನ್ನು ಕರ್ನಾಟಕ ಪ್ರೆಸ್ಸ್ ಕ್ಲಬ್ ಉತ್ತರಕನ್ನಡ ಜಿಲ್ಲಾ ಘಟಕದ ಪರವಾಗಿ ಅದ್ಯಕ್ಷ ನಾಗರಾಜ ದೈವಜ್ಞ ಮುಂಡಗೋಡ್ ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಕೂಡಲೇ ಪ್ರತ್ರಕರ್ತರ ಜೊತೆ ಅನುಚಿತವಾಗಿ ವರ್ತಿಸಿದ ದಾಂಡೇಲಿ ಸಿ.ಪಿ.ಐ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.