ಕುಮಟಾ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತ ಪಟ್ಟ ವಿನೋದ್ ಶಂಕರ್ ಅಂಬಿಗ ಅವರ ಮನೆಗೆ ಬೇಟಿ ನೀಡಿ 8 ಲಕ್ಷ ರೂಪಾಯಿ ಪರಿಹಾರದ ಮಂಜೂರಾತಿ ಪತ್ರ ವಿತರಿಸಿದ ಮೀನುಗಾರಿಕೆ ಸಚಿವ ಮಂಕಾಳ. ಎಸ್ .ವೈದ್ಯ
ಕುಮಟಾ-ಕುಮಟಾ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತ ಪಟ್ಟ ವಿನೋದ್ ಶಂಕರ್ ಅಂಬಿಗ ಅವರ ಮನೆಗೆ ಇಂದು ಮೀನುಗಾರಿಕೆ ಸಚಿವ ಮಂಕಾಳ ಎಸ್ ವೈದ್ಯ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೀನುಗಾರ ಸಂಕಷ್ಟ ಪರಿಹಾರ ನಿಧಿಯಿಂದ 8 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಮಂಜೂರಾತಿ ಪತ್ರವನ್ನು ವಿತರಿಸಿದರು. ಕುಟುಂಬದ ನಿರ್ವಹಣೆಗಾಗಿ ವಯಕ್ತಿಕವಾಗಿ 50 ಸಾವಿರ ರೂಪಾಯಿ ಹಣವನ್ನು ಕುಟುಂಬಸ್ಥರಿಗೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.