ಮಂಡಗೋಡ್-ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕು ಪಂಚಾಯತ್ ಆವರಣದಲ್ಲಿ ತೆರೆಯಲಾದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕಾ ಕಚೇರಿಯನ್ನು ಮೀನುಗಾರಿಕೆ, ಬಂದರು ಮತ್ತುಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಮಂಕಾಳ ಎಸ್. ವೈದ್ಯ ರವರು ಹಾಗೂ ಯಲ್ಲಾಪುರ ಮುಂಡಗೋಡ ವಿಧಾನ ಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಅರಬೈಲ್ ಶಿವರಾಮ್ ಹೆಬ್ಬಾರ ರವರು ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಎನ್ಆರ್ಎಲ್ಎಂ ಯೋಜನೆಯಡಿ ತಾಲ್ಲೂಕಿನ ಸಾಲಗಾಂವ ಗ್ರಾಮ ಪಂಚಾಯತ್ ಮಟ್ಟದ ನಿಸರ್ಗ ಸಂಜೀವಿನಿ ಒಕ್ಕೂಟದ ಮಹಿಳೆಯರು ಉತ್ಪಾದಿಸಿದ ಆದಾಯೋತ್ಪನ್ನ ಚಟುವಟಿಕೆಗಳ ಮಾರಾಟಕ್ಕಾಗಿ ಗಣೇಶ ಚತುರ್ಥಿ ಪ್ರಯುಕ್ತ ಆಯೋಜಿದ್ದ ಸಂಜೀವಿನಿ ಮಾಸಿಕ ಸಂತೆ ಹಾಗೂ ಇಂದೂರ ಗ್ರಾಮ ಪಂಚಾಯತಿ ಮಟ್ಟದ ಕನಕಾಂಬರಿ ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರಿಂದ ನಡೆಸಲ್ಪಡುವ ಸಂಜೀವಿನಿ ಶುಚಿ-ರುಚಿ ಮೊಬೈಲ್ ಕ್ಯಾಂಟಿನ್ನ್ನು ಮಾನ್ಯರು ಉದ್ಘಾಟಿಸಿ ಮೊಬೈಲ್ ಕ್ಯಾಂಟಿನ್ ಮೂಲಕ ಗ್ರಾಮೀಣ ಪ್ರದೇಶದ ಸ್ವಸಹಾಯ ಗುಂಪಿನ ಮಹಿಳೆಯರು ಎಲ್ಲ ಕಡೆಗಳಲ್ಲೂ ಕೂಡ ಗುಣಮಟ್ಟದ ಆಹಾರವನ್ನು ಜನಸಾಮಾನ್ಯರಿಗೆ ಪೂರೈಸುವಂತಾಗಲಿ. ಜೋತೆಗೆ ತಾಲ್ಲೂಕಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಜೀವಿನಿ ಶುಚಿ ರುಚಿ ಮೊಬೈಲ್ ಕ್ಯಾಂಟಿನ್ಗಳು ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು.
ನಂತರ ತಾಪಂ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸನ್ಮಾನ್ಯ ಸಚಿವರು ಹಾಗೂ ಶಾಸಕರು ಶಿಕ್ಷಣ ಫೌಂಡೇಶನ್ ವತಿಯಿಂದ ದೇಣಿಗೆ ನೀಡಿದ ನಾಗನೂರು ಮತ್ತು ಓಣಿಕೇರಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಕಂಪ್ಯೂಟರ್ ಹಾಗೂ ಮೊಬೈಲ್ ವಿತರಣೆ ಮಾಡಲಾಯಿತು. ಜೊತೆಗೆ ಇನ್ನರ್ ವಿಲ್ ಸಂಸ್ಥೆಯಿಂದ ಬಾಚಣಕಿ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟಕ್ಕೆ ದೇಣಿಗೆ ನೀಡಿದ ಹೊಲಿಗೆ ಯಂತ್ರವನ್ನು ಮಾನ್ಯ ಸಚಿವರು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶೀ ವಿ.ಎಸ್. ಪಾಟೀಲ್, ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಹಾಗೂ ತಾಲ್ಲೂಕ ಅಧ್ಯಕ್ಷರು, ಸದಸ್ಯರುಗಳು, ಪಟ್ಟಣ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿರಸಿ ಉಪವಿಭಾಗ ಅಧಿಕಾರಿಗಳು, ತಹಶಿಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.