ಭಟ್ಕಳ-ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ(ರಿ) ಭಟ್ಕಳ ಬುಧವಾರ ಬೆಳ್ಳಿಗೆ 6 ಗಂಟೆಗೆ ತಾಲೂಕ ಘಟಕ ವತಿಯಿಂದಭಟ್ಕಳದಲ್ಲಿ ಪತ್ರಿಕಾ ವಿತರರ ದಿನಾಚರಣೆಯನ್ನು ತಾಲೂಕ ಅಧ್ಯಕ್ಷ ರಾಮಕೃಷ್ಣ ಭಟ ನೇತೃತ್ವದಲ್ಲಿ ಆಚರಿಸಲಾಯಿತು .ಪತ್ರಿಕೆಯ ಏಜೆಂಟರು ಹಾಗೂ ವಿತರಕರ ಸಮ್ಮುಖದಲ್ಲಿ ಕೇಕ್ ಕತ್ತಯಿಸುವ ಮೂಲಕ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಿದರು.
ಇದೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಎಲ್ಲಾ ವಿತರಕರಿಗೆ ಶುಭಾಶಯಗಳು ಕೋರಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ರಾಮಕೃಷ್ಣ ಭಟ್, ಪದಾಧಿಕಾರಿಗಳಾದ ಮಂಜುನಾಥ್ ದೇವಡಿಗ,ಕಿರಣ್ ಗೊಂಡ ,ಮಂಜುನಾಥ್ ನಾಯ್ಕ್ ,ಲಕ್ಷ್ಮಣ್ ನಾಯ್ಕ್ .ಯಶಸ್ವಿ ಭಟ್, ರಶ್ಮಿತಾ ಭಟ್ ಉಪಸ್ಥಿತರಿದ್ದರು.