ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಶ್ರೀ ಈರ ನಾಯ್ಕ್ ಚೌತನಿ ಅವರಿಗೆ ಶ್ರೀ ಕುದುರೇಬಿರಪ್ಪ ಯುವಕ ಸಂಘದಿಂದ ಸನ್ಮಾನ
ಭಟ್ಕಳ-ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಶ್ರೀ ಈರ ನಾಯ್ಕ್ ಚೌತನಿ ಅವರಿಗೆ , ಅವರ ಸಾಮಾಜಿಕ ಸೇವೆಗಾಗಿ ಶನಿವಾರ ಶ್ರೀ ಕುದುರೇಬಿರಪ್ಪ ಯುವಕ ಸಂಘ(ರಿ) ಚೌತನಿ ಇವರ ವತಿಯಿಂದ ಭಟ್ಕಳದ ಚೌತನಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಅವರ ಹುಟ್ಟೂರಿನಲ್ಲಿ ಸನ್ಮಾನ ಮಾಡಲಾಯಿತು.
ಈರ ನಾಯ್ಕ ಚೌತನಿ ಅವರು ಭಟ್ಕಳದ ಅನೇಕ ಸಂಘ ಸಂಸ್ಥೆಗಳ ಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಭಟ್ಕಳದಲ್ಲಿ ಕನ್ನಡ ಪರ ಹೋರಾಟಗಾರರಾಗಿ , ಸಾಮಾಜಿಕ ಸೇವೆ ಮತ್ತು ಅಕ್ರಮ ಚುಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ತಮ್ಮ ಪ್ರಾಮಾಣಿಕ ಸೇವೆಯನ್ನು ಕೂಡ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವಕ ಸಂಘದ ಅಧ್ಯಕ್ಷ ಶಂಕರ್ ನಾಯ್ಕ, ಮಾದೇವ್ ನಾಯ್ಕ, ಲಚಮಯ್ಯ ನಾಯ್ಕ, ಮಹೇಶ ನಾಯ್ಕ, ನಿಲಾಧರ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.