ಶಿರಸಿ: ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಮೂಲಕ ಅತೀ ಸೂಕ್ಷö್ಮ ಪ್ರದೇಶ ಘೋಷಣೆ ಮೂಲಕ ಪರಿಸರ ಸಂರಕ್ಷಣೆಗೆದೊAದಿಗೆ ಮಾನವನ ದಿನನಿತ್ಯ ಚಟುವಟಿಕೆ ಮತ್ತು ಮೂಲಭೂತ ಸೌಕರ್ಯ ನಿಯಂತ್ರಿಸುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿರುವ ಕರಡು ಕಸ್ತೂರಿರಂಗನ್ ವರದಿಯಲ್ಲಿನ ಅವೈಜ್ಞಾನಿಕ ಪ್ರಮುಖ ಹತ್ತು ಅಂಶಗಳನ್ನ ರಾಜ್ಯ ಸರ್ಕಾರಕ್ಕೆ ಇಂದು ಬಿಡುಗಡೆಗೊಳಿಸಿದರು ಎಂದು ರಾಜ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ, ಗ್ರಾಮದ ಶೇ. ೨೦ ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷö್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ, ಘೋಷಿಸಿದ ಸೂಕ್ಷö್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಭೌತಿಕ ಸರ್ವೇ ಮಾಡಿ ವಿಷಯ ಸಂಗ್ರಹ ಮಾಡಿದ್ದು ಇರುವುದಿಲ್ಲ, ಪಶ್ಚಿಮ ಘಟ್ಟ ಪ್ರದೇಶವನ್ನ ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು, ನೀತಿ- ನಿಯಮ ಇರುವುದರಿಂದ ಹೊಸಮಾನದಂಡದ ಅವಶ್ಯಕತೆ ಇರುವುದಿಲ್ಲ, ಸೂಕ್ಷö್ಮ ಪ್ರದೇಶ ಘೋಷಿಸುವುದರಿಂದ ಗ್ರಾಮಸ್ಥರ ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದನ್ನ ಅವಲೋಕನ ತೆಗೆದುಕೊಂಡದ್ದು ಇರುವುದಿಲ್ಲ ಎಂಬ ಅಂಶವನ್ನ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಉಪಗ್ರಹ ಆಧಾರಿತ ಸರ್ವೇ ಆಗಿರುವುದರಿಂದ ಅಡಿಕೆ, ತೆಂಗಿನ ತೋಟ ಹಾಗೂ ಇನ್ನೀತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸರ್ಗಿಕ ವಿರೋಧವಾದ ಕ್ರಮ, ಘೋಷಿಸಲ್ಪಟ್ಟ ಸೂಕ್ಷö್ಮ ಪ್ರದೇಶದಲ್ಲಿ ಹಸಿರುಕರಣದ ಪ್ರದೇಶದಿಂದ ಖಾಸಗಿ ಮತ್ತು ಅರಣ್ಯವಾಸಿಗಳ ತೋಟಗಾರಿಕೆ ಕೃಷಿ ಚಟುವಟಿಕೆಯ ಹಸಿರುಕರಣ ಪ್ರದೇಶವನ್ನ ಭೌತಿಕ ಸರ್ವೇ ಮೂಲಕ ನೈಸರ್ಗಿಕ ಅರಣ್ಯ ಗಡಿ ಗುರುತಿಸಿರುವದಿಲ್ಲ, ಘೋಷಿಸಿದ ಹಳ್ಳಿ(ಗ್ರಾಮದ) ನಿರ್ದಿಷ್ಟ ಸರ್ವೇ ನಂ ಪ್ರದೇಶ ವ್ಯಾಖ್ಯಾಯಿಸದೇ ಇರುವುದು ಅವೈಜ್ಞಾನಿಕ ಇವುಗಳನ್ನು ಪ್ರಮುಖ ಅವೈಜ್ಞಾನಿಕ ಅಂಶಗಳಾಗಿದೆ ಎಂದು ಮನವಿಯಲ್ಲಿ ಅವರು ಪ್ರಸ್ತಾಪಿಸಿದ್ದಾರೆ.
ಕೇರಳ ಮಾದರಿ:
ವರದಿಯನ್ನ ವೈಜ್ಞಾನಿಕ ಮತ್ತು ಭೌತಿಕ ಸರ್ವೇ ಜರುಗಿಸದೇ ಅರಣ್ಯೀಕರಣ ಭೂಮಿ ಹೊರತಾಗಿ ಜನವಸತಿ ಪ್ರದೇಶವನ್ನ ಸಹಿತ ಸೂಕ್ಷö್ಮ ಪ್ರದೇಶ ದಾಖಲಿಸಿರುವ ಅಂಶಕ್ಕೆ ಕೇರಳ ಸರ್ಕಾರ ಆಕ್ಷೇಪಿಸಿದ ಮಾದರಿಯಂತೆ ರಾಜ್ಯ ಸರ್ಕಾರವು ಸಹಿತ ಆಕ್ಷೇಪಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.