ಅಂಕೋಲಾ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಅರ್ಜಿ ವಿಚಾರಣೆ ಮುಗಿಯುವರೆಗೂ ಸಾಗುವಳಿಗೆ ಆತಂಕ ಮತ್ತು ಒಕ್ಕಲೇಬ್ಬಿಸಬಾರದೆಂಬ ಕಾನೂನಿನ ಅಂಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಯನ್ನ ಒಕ್ಕಲೇಬ್ಬಿಸುವ ಆದೇಶವನ್ನ ಸಹಾಯಕ ಸಂರಕ್ಷಣಾಧಿಕಾ ಅಂಕೋಲಾ ಇವರು ಆದೇಶ ನೀಡಿರುವದು ಅರಣ್ಯಧಿಕಾರಿಯಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಅಂಕೋಲಾ ಸಹಾಯಕ ಸಂರಕ್ಷಣಾಧಿಕಾರಿ ಕೆ.ಸಿ.ಜಯೇಶ ಅವರು ಇತಂಹ ಆದೇಶವನ್ನು ಸೆ.೬ ರಂದು ನೀಡಿರುವರು ಅಂಕೋಲಾ ತಾಲೂಕಿನ ಸುಂಕಸಾಲು ಗ್ರಾಮಪಂಚಾಯತಿ ವ್ಯಾಪ್ತಿಯ ಕವಲಳ್ಳಿ ಗ್ರಾಮದ ಸರ್ವೇ ನಂ.೩ ರಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪ್ರಕಾಶ ಕೃಷ್ಣ ಆಚಾರಿ(೭೦ವರ್ಷ) ಅವರು ೩ ಎಕರೆ ೯ ಗುಂಟೆ ಪ್ರದೇಶ ಅನಾದಿಕಾಲದಿಂದಲೂ ಒತ್ತುವರಿ ಮಾಡಿ ಬಾಳೆ, ಮಾವು, ಅಡಿಕೆ ಮರ, ವಾಸದ ಮನೆ ಹಾಗೂ ಬಾವಿ ಕಟ್ಟಿಕೊಂಡು ಕುಟುಂಬದೊAದಿಗೆ ಜೀವನವನ್ನ ನಡೆಸುತ್ತಿದ್ದರು. ಅಲ್ಲದೇ ಈ ಕ್ಷೇತ್ರ ಬಿಟ್ಟರೇ ಇವರಿಗೆ ಇನ್ಯಾವದೆ ಸಾಗುವಳಿ ಕ್ಷೇತ್ರ ಇರುವುದಿಲ್ಲ ಎಂದು ಅವರು ತಿಳಿಸಿದರು.
ಸಹಾಯಕಸಂರಕ್ಷಣಾಅಧಿಕಾರಿಗಳು ಅಧಿಕಾರÀಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೩ ಎಕರೆ ೧೧ ಗುಂಟೆ ಅರ್ಜಿ ಸಲ್ಲಿಸಿದ ಪ್ರತಿ, ೨ ಎಕರೆ ೨೦ ಗುಂಟೆ ಜಿ.ಪಿ.ಎಸ್ ಸರ್ವೇ ಆಗಿರುವ ನಕಾಶೆ, ಮನೆ ರಶೀದಿ, ಬಂಗಾರಪ್ಪ ಪಟ,್ಟ ೩೫ ವರ್ಷಗಳ ಹಿಂದೆ ವಾಸ್ತವ್ಯದ ಮನೆಗೆ ಬೆಂಕಿ ಬಿದ್ದು ಸರಕಾರ ಪರಿಹಾರದ ಮಂಜೂರು ನೀಡಿದ ಧೃಡೀಕರಣ ಪತ್ರ ಮುಂತಾದ ದಾಖಲೆಗಳನ್ನು ಸಲ್ಲಿಸಿದ್ದು ಇತ್ತು ಅರ್ಜಿ ಸುಪ್ರೀಂ ಕೋರ್ಟ ಆದೇಶದಂತೆ ಪುನರ್ ಪರಿಶೀಲನೆಯ ಹಂತದಲ್ಲಿ ಇರುವಂತ ಸಂದರ್ಭದಲ್ಲಿ, ಒಕ್ಕಲೇಬ್ಬಿಸಲು ನೀಡಿದ ಆದೇಶ ಅರಣ್ಯ ಅಧಿಕಾರಿಯ ಕಾನೂನು ಅಜ್ಞಾನದ ಪ್ರತೀಕವಾಗಿದೆ ಎಂದು ರವೀಂದ್ರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಅರಣ್ಯವಾಸಿಗೆ ಆತಂಕ:
ಕಾನೂನು ವ್ಯತಿರಿಕ್ತವಾಗಿ, ಕಾನೂನು ವಿಧಿವಿಧಾನ ಅನುಸರಿಸದೇ ಅರ್ಜಿ ಕಾನೂನು ಭಾಹಿರವಾಗಿ ಅರಣ್ಯವಾಸಿಗಳನ್ನ ಅರ್ಜಿ ವಿಚಾರಣೆ ಹಂತದಲ್ಲಿ ೩೦ ದಿನಗಳಲ್ಲಿ ಒಕ್ಕಲೇಬ್ಬಿಸಲು ನೀಡಿದ ಆದೇಶದಿಂದ ಮತ್ತು ಅತಿಕ್ರಮಣ ಸ್ಥಳದಿಂದ ತೆರವುಗೊಳಿಸದಿದ್ದಲ್ಲ್ಲಿ ಅತಿಕ್ರಮಣ ಸ್ಥಳದಲ್ಲಿರುವಂತೆ ಚರ ಮತ್ತು ಸ್ಥಿರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂಬ ಆದೇಶದಿಂದ ಜಿಲ್ಲೆಯ ಅರಣ್ಯ ವಾಸಿಗಳಲ್ಲಿ ಆತಂಕ ಉಂಟಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.