ಕಾರವಾರ: ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ತಾಯಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ ಅಸ್ನೋಟಿಕರ್ ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು.
ಕ್ಷೇತ್ರದಲ್ಲಿ ಅಸ್ನೋಟಿಕರ್ ಅಭಿಮಾನಿಗಳ ಜೊತೆ ನಿಂತಿದ್ದ ಶುಭಲತಾ ವಿಧಾನ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಯಲ್ಲಿ ಪತಿ ವಸಂತ್ ಅಸ್ನೋಟಿಕರ್ ಹತ್ಯೆಯ ನಂತರ ಶುಭಲತಾ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಮಗ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ರಾಜಕೀಯಕ್ಕೆ ಬಂದ ನಂತರ ಶುಭಲತಾ ರಾಜಕೀಯದಿಂದ ದೂರ ಉಳಿದಿದ್ದರು.