ಕಾರವಾರ ದಿನಾಂಕ 29-09-2024 ರಂದು ಸಿದ್ದಾಪೂರ ತಾಲೂಕಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಹಲ್ಲೆಗೆ ಒಳಗಾದ ಸಿದ್ದಾಪುರ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರು, ಪತ್ರಕರ್ತ ನಾಗರಾಜ ನಾಯ್ಕ ಹಾಗೂ ಅವರ ಪತ್ನಿ ಪತ್ರಿಕಾ ಸಂಪಾದಕರು ಹಾಗೂ ಪ್ರಕಾಶಕರಾದ ಮಮತಾ ನಾಯ್ಕ ದಂಪತಿಗಳ ಮೇಲಿನ ಹಲ್ಲೆ ಅತ್ಯಂತ ಖಂಡನೀಯ ಎಂದು ಪತ್ರಕರ್ತ , ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸೂರಜ್ ಪಾಂಡುರಂಗ ನಾಯ್ಕ ಅಂಕೋಲಾ ಖಂಡಿಸಿದ್ದಾರೆ.
ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲಿ ಬಿದ್ದುಕೊಂಡಿದ್ದ ಅನಾಥರ ರಕ್ಷಣೆ ಮಾಡುತ್ತ ಸರಕಾರ, ಅಧಿಕಾರಿಗಳು ಮಾಡಬೇಕಾದ ಕಾರ್ಯವನ್ನು ತಾವು ಯಾವುದೆ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಮಾಡತ್ತಿರುವ ನಾಗರಾಜ ನಾಯ್ಕ ದಂಪತಿಗಳ ಸಮಾಜಮುಖಿ ಕಾರ್ಯಗಳನ್ನು ಸಹಿಸಲಾಗದ ದುಷ್ಟರು ನಾಗರಾಜ ನಾಯ್ಕ ಹಾಗೂ ಒಂಬತ್ತು ತಿಂಗಳ ಗರ್ಭಿಣಿ ಮಮತಾ ನಾಯ್ಕ ಮೇಲೆ ಹಲ್ಲೆಮಾಡಿ ಕೊಲೆಗೆ ಯತ್ನಿಸಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದ್ದು ಇದರ ಸಮಗ್ರ ತನಿಖೆಗೆ ಒಳಪಡಿಸಿ ಹಲ್ಲೆಕೋರರ ವಿರುದ್ದ ಕಠೀಣ ಕಾನೂನು ಕ್ರಮಕೈಕೊಳ್ಳಬೇಕು ಎಂದು ಕರ್ನಾಟಕ ರಣಧೀರರ ವಧಿಕೆ ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತಿದೆ.
ಇವತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ಈ ಪ್ರಕರಣವೇ ಉದಾಹರಣೆಯಾಗಿದೆ. ಸಮಾಜದಲ್ಲಿ ಭಯ ಹುಟ್ಟಿಸುವ ಭಯೋತ್ಪಾದಕರುರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಜನಸಾಮಾನ್ಯರು ಭಯದಲ್ಲಿ ಜೀವಿಸುವಂತಾಗಿದೆ. ಅದರಲ್ಲು ಶಿರಸಿ – ಸಿದ್ದಾಪುರ ಗೂಂಡಾ ರಾಜ್ಯದಂತಾಗಿದೆ. ಆರೋಪಿಗಳನ್ನು ಹೋರಗೆ ಬಿಟ್ಟು ಪೋಲೀಸರು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಘಟನೆ ನಡೆದು ಮೂರ್ನಾಲ್ಕು ದಿನವಾದರು ಆರೋಪಿಗಳ ಬಂಧನವಾಗದಿರುವುದು ಸಂಸಯಕ್ಕೆ ಕಾರಣವಾಗಿದೆ. ಆರೋಪಿಗಳ ರಕ್ಷಣೆಗೆ ಪ್ರಭಾವಿ ವ್ಯಕ್ತಿಗಳು ಇರುವುದು ಸ್ಪಷ್ಟವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಥಳಿಯ ಶಾಸಕರಾದ ಭೀಮಣ್ಣ ನಾಯ್ಕ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರೀಷ್ಠಾಧಿಕಾರಿಗಳು ಇಷ್ಟು ಹೊತ್ತಿಗೆ ಸ್ಥಳಕ್ಕೆ ಬೇಟಿ ನೀಡಬೇಕಿತ್ತು, ಈ ಕುರಿತು ಕ್ರಮ ಕೈ ಗೊಳ್ಳಬೇಕಿತ್ತು. ಆದರೆ ಇನ್ನಾದರು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಥಳಿಯ ಶಾಸಕರಾದ ಭೀಮಣ್ಣ ನಾಯ್ಕ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರೀಷ್ಠಾಧಿಕಾರಿಗಳು ಆಶ್ರಮಕ್ಕೆ ಬೇಟಿ ನೀಡಿ ಆಶ್ರಮಕ್ಕೆ ಬೇಕಾದ ನೆರವಿನ ಜೊತೆಗೆ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳಿಗೆ, ಆಶ್ರಮವಾಸಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಹಾಗೂ ಸ್ಥಳೀಯ ಪೊಲೀಸ ಅಧಿಕಾರಿಗಳಿಗೆ ನಿಷ್ಪಕ್ಷಪಾತ ತನಿಖೆಗೆ ಸೂಚಿಸಬೇಕು, ಹಲ್ಲೆಕೋರರನ್ನು ಬಂದಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ , ಪತ್ರಕರ್ತ ಸೂರಜ್ ಪಾಂಡುರಂಗ ನಾಯ್ಕ ಅಂಕೋಲಾ ಆಗ್ರಹಿಸಿದ್ದಾರೆ.