ಕಾರವಾರ- ಕಾರವಾರ ನಗರದ ಹೊರವಲಯದಲ್ಲಿರುವ ಕಾಳಿ ಸೇತುವೆ ಮೇಲೆ ಕೆಲವು ದಿನಗಳಿಂದ ದೀಪಗಳು ಹರಿಯುತ್ತಿಲ್ಲ. ಇದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಕೂಡಾ ತೀವ್ರ ಸ್ವರೂಪ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಸಂಭಂದಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ ಆರ್ ಬಿ ಕಂಪನಿಯವರು ಗಮನ ಹರಿಸದೇ ಇರುವುದರಿಂದಲೇ ಕಾಳಿ ಸೇತುವೆ ಮೇಲೆ ಸಂಪೂರ್ಣ ಕತ್ತಲೆ ಆವರಿಸಿದೆ. ಮತ್ತು ರಾಷ್ಟ್ರೀಯ ಹೆದ್ದಾರಿಯ ಸುರಕ್ಷತೆ ಬಗ್ಗೆ ತೀವ್ರ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯವಾಗಿದೆ. ಆದ್ದರಿಂದ ಕೂಡಲೇ ಕಾಳಿ ಸೇತುವೆಯ ಮೇಲೆ ದೀಪಗಳು ದುರಸ್ತಿ ಕಾರ್ಯ ಮಾಡಬೇಕೆಂದು ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಇಮೇಲ್ ಹಾಗೂ ವಾಟ್ಸಾಪ್ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಮನವಿ ಸಲ್ಲಿಸಿದ್ದಾರೆ.