ಕುಮಟಾ-ಮಾನ್ಯ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾಸ್ವಾಮಿ ಅವರನ್ನು ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಮಟಾ ಜೆಡಿಎಸ್ ಘಟಕದ ವತಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರಿಗೆ ಕುಮಟಾ ತಹಶಿಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಕೊರ್ ಕಮಿಟಿ ಸದಸ್ಯ ಸೂರಜ್ ನಾಯ್ಕ್ ಸೋನಿ ಸದಾ ಬಡ ಜನರ ಹಾಗೂ ರೈತರ ಪರವಾಗಿ ಶ್ರಮಿಸುವ ನಮ್ಮ ನಾಯಕರಾದ ಶ್ರೀ ಎಚ್ ಡಿ ಕುಮರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ.ಆದರೆ ಒಬ್ಬ ಭ್ರಷ್ಟ ಅಧಿಕಾರಿ ಈ ರೀತಿ ನಿಂದಿಸುವುದು ನಿಜಕ್ಕೂ ಖಂಡನೀಯ ಎಂದರು.ಮಾಜಿ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾಸ್ವಾಮಿ ಅವರನ್ನು ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷರಾದ ಸಿ ಜಿ ಹೆಗಡೆ,ಕಾರ್ಯಾಧ್ಯಕ್ಷ ಬಲಿಂದ್ರ ಗೌಡ,ಕುಮಟಾ ನಗರ ಅಧ್ಯಕ್ಷ ಯಶವಂತ ಗೌಡ,ಜಿಲ್ಲಾ ಕಾರ್ಯದರ್ಶಿ ಗೋವಿಂದ್ರಾಯ ಶಾನಭಾಗ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ರೋಶನ್ ನಾಯ್ಕ,ಚಿನ್ನು ಅಂಬಿಗ,ನಾಗೇಶ್ ನಾಯ್ಕ,ವಸಂತ್ ಗೌಡ,ದಿವಾಕರ ನಾಯ್ಕ,ನಾಗಪ್ಪ ಪಟಗಾರ,ಶಶಿ ಅಡುಗುಳಿ,ಚಂದ್ರಶೇಖರ್ ಪಾಲೇಕರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಶ್ರೀ ಎಚ್ ಡಿ ಕುಮಾರಸ್ವಾಮಿಯವರ ಅಭಿಮಾನಿಗಳು ಉಪಸ್ಥಿತರಿದ್ದರು.