ಭಟ್ಕಳ-ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ಹಾಗೂ ಓಬಿಸಿ ಮೋರ್ಚಾ ಇವರ ಸಹಯೋಗದಲ್ಲಿ ಭಟ್ಕಳ ಸಂತೆ ಮಾರುಕಟ್ಟೆಯಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಮಂಡಲದ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ನಾಯ್ಕ ಇವರು ಈ ಸದಸ್ಯತ್ವ ಅಭಿಯಾನದ ಉದ್ದೇಶ ಬಿಜೆಪಿಗೆ ಹೆಚ್ಚು ಹೆಚ್ಚು ಸಾರ್ವಜನಿಕ ಬೆಂಬಲವನ್ನು ಹೆಚ್ಚಿಸುವುದು ಹಾಗೂ ಬಿಜೆಪಿಯು ರಾಷ್ಟ್ರ ನಿರ್ಮಾಣದ ಉತ್ಸಾಹದೊಂದಿಗೆ ದೇಶದ ಜನರನ್ನು ಸಂಪರ್ಕಿಸುವುದು ಹಾಗೂ ಸಂಘಟಿಸುವುದು. ಮತ್ತು 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃಧ್ಧಿ ಹೊಂದಿದ ದೇಶವನ್ನಾಗಿ ಮಾಡುವುದು. ಆದ್ದರಿಂದ ಪ್ರಜ್ಞಾವಂತ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು 8800002024 ನಂಬರಿಗೆ ಮಿಸ್ಸ್ಡ್ ಕಾಲ್ ಮಾಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬಿಜೆಪಿಯ ಸದಸ್ಯರಾಗಿ ವಿಶ್ವದಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಾಡಿಗರ, ಶ್ರೀಕಾಂತ್ ನಾಯ್ಕ,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಿವಾನಿ ಶಾಂತಾರಾಮ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್ ,ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ನಾಯ್ಕ, ಶ್ರೀಧರ ನಾಯ್ಕ,ಮುಖಂಡರಾದ ರಾಜೇಶ್ ನಾಯ್ಕ, ಓಬಿಸಿ ಮೋರ್ಚಾ ಅಧ್ಯಕ್ಷರಾದ ಉಮೇಶ್ ನಾಯ್ಕ, ಸುರೇಶ್ ನಾಯ್ಕ,ಜಗದೀಶ್ ನಾಯ್ಕ,ಯಶೋಧರ ನಾಯ್ಕ, ಮಾರುತಿ ನಾಯ್ಕ,ಚಂದ್ರು ಗೊಂಡ,ವಿಜೇತ್ ಶೆಟ್ಟಿ, ವಿಜಯಾ ನಾಯ್ಕ,ವಿಷ್ಣು ನಾಯ್ಕ ಹಾಗೂ ಕಾರ್ಯಕರ್ತರು ಹಾಜರಿದ್ದರು.