ಯಲ್ಲಾಪುರ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಅಕ್ಟೋಬರ್ ೧೫ ಮು.೧೦ ಗಂಟೆಗೆ ಸ್ಥಳೀಯ ವೆಂಕಟರಮಣ ದೇವಸ್ಥಾನದಲ್ಲಿ ಜರುಗಲಿದ್ದು, ನವೆಂಬರ್ ೭ ರಂದು ಬೆಂಗಳೂರಿನಲ್ಲಿ ಜರುಗಲಿರುವ “ಬೆಂಗಳೂರು ಚಲೋ” ಕಾಯಕ್ರಮದ ಪೂರ್ವಭಾವಿ ಸಭೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಾಯಿತ ಸದಸ್ಯರಿಗೆ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿ, ಗುರುತಿನ ಪತ್ರ ವಿತರಿಸುವ ಕುರಿತು ಸಭೆಯಲ್ಲಿ ಅಂದು ಚರ್ಚಿಸಲಾಗುವುದೆಂದು ಅವರು ತಿಳಿಸಿದ್ದಾರೆ.ಆಸಕ್ತರು ಸಭೆಗೆ ಆಗಮಿಸಲು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.