ಭಟ್ಕಳ – ನವರಾತ್ರಿ ಕೊನೆಯ ದಿನವಾದ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಮಹಾಸಂಸ್ಥಾನಂ ಶಕಟಪುರಂ ( ಮಠ) ನಲ್ಲಿ ನಿನಾದ ಸಂಗೀತ ಸಂಚಯದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಶ್ರೀ ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಗುರುಗಳ ಸಮ್ಮುಖದಲ್ಲಿ ಸುದೀರ್ಘ ಎರಡು ಗಂಟೆಗಳ ಕಾಲ ಉಮೇಶ ಮುಂಡಳ್ಳಿ ಯವರು ಭಕ್ತಿಯ ಗಾನ ಸುಧೆ ಹರಸಿದರು. ಸುಗಮಸಂಗೀತ ಕ್ಷೇತ್ರದಲ್ಲಿ ಜಿಲ್ಲೆಯ ಮನೆಮಾತಾದ ಉಮೇಶ ಮುಂಡಳ್ಳಿ ಅವರ ಅನೇಕ ದಾಸರ ಪದಗಳು ಭಕ್ತಿಗೀತೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಗುರುಗಳು ಸಹ ಗಾಯನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹರಸಿದರು.
ಕೀಬೋರ್ಡ್ ನಲ್ಲಿ ಶ್ರೀ ಶಿವಶಂಕರ್ ಭಟ್, ಕೊಪ್ಪ ಹಾಗೂ ತಬಲದಲ್ಲಿ ಶ್ರೀ ಯಶಸ್ಸ್ ಆರ್ ಭಾರದ್ವಾಜ್ ಕೊಪ್ಪ ಹಾಗೂ ಶ್ರೀ ರಾಧಾಕೃಷ್ಣ್ ಭಾರದ್ವಾಜ್ ಅವರು ಸಾತ್ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಮಠದಿಂದ ಕಲಾವಿದರನ್ನು ಗೌರವಿಸಲಾಯಿತು.