ಭಟ್ಕಳ : ಇದೇ ಬರುವ ಫೆಬ್ರುವರಿ ಮೂರನೇ ತಾರೀಕಿನ ಸೋಮವಾರದಂದು ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ರಥ ಸಪ್ತಮಿಯ ಹಿನ್ನೆಲೆಯಲ್ಲಿ ವರ್ಷಂಪ್ರತಿಯಂತೆ ಪಲ್ಲಕ್ಕಿ ಉತ್ಸವವು ನಡೆಯಲಿದೆ. ಅಂದು ಮುಂಜಾನೆ ಶ್ರೀ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ ಒಂದು ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ ಸಂಜೆ 4:00ಗೆ ಪುರ ಬೀದಿಯಲ್ಲಿ ಶ್ರೀಧರ ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದ್ದು ಪಲ್ಲಕ್ಕಿ ಮೆರವಣಿಗೆಯು ಪದ್ಮಾವತಿ ದೇವಸ್ಥಾನದಿಂದ ಹೊರಟು ರಘುನಾಥ ರಸ್ತೆಯ ಮೂಲಕ ಮಣ್ಕಳಿ ಕೇರಿಯ ಪುಷ್ಪಾಂಜಲಿ ಚಿತ್ರಮಂದಿರದವರೆಗೆ ತಲುಪಿ ಅಲ್ಲಿಂದ ಹಿಂದಿರುಗಿ ವೀರ ವಿಠಲ ರಸ್ತೆಯ ಮೂಲಕ ಒಡೆಯರ ಮಠ ಮಾರ್ಗವಾಗಿ ನೆಹರು ರಸ್ತೆಯನ್ನು ತಲುಪಿ ಅಲ್ಲಿಂದ ಹೂವಿನ ಚೌಕ, ಮುಖ್ಯ ರಸ್ತೆಯ ಮೂಲಕ ಸಾಗಿ ಜಟ್ಟಪ್ಪ ನಾಯಕ ಬಸದಿಯ ಎದುರಿನ ರಸ್ತೆಯ ಮೂಲಕ ಆಸರ ಕೇರಿಯನ್ನು ಪ್ರವೇಶಿಸಿ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಹಾಗೆಯೇ ಸೊನಾರಕೇರಿಯ ಮಾರ್ಗವಾಗಿ ಶಹರ ಪೊಲೀಸ್ ಠಾಣೆಯನ್ನು ತಲುಪಿ ಅಲ್ಲಿಂದ ಮುಖ್ಯ ರಸ್ತೆ,ಯ ಮೂಲಕ ಹಳೆ ಬಸ್ ನಿಲ್ದಾಣ, ಕಳಿ ಹನುಮಂತ ದೇವಸ್ಥಾನ ರಸ್ತೆಯ ಮೂಲಕ ಪದ್ಮಾವತಿ ದೇವಾಲಯಕ್ಕೆ ಹಿಂದಿರುಗಲಿದೆ. ಈ ಪಲ್ಲಕ್ಕಿ ಉತ್ಸವದ ವಿಶೇಷವೆಂದರೆ ರಥಸಪ್ತಮಿಯ ಮೊದಲ ದಿನ ಪದ್ಮಾವತಿ ಅಮ್ಮನವರ ಪಲ್ಲಕ್ಕಿಯು ನಿಚ್ಚಲಮಕ್ಕಿ ವೆಂಕಟರಮಣ ದೇವರ ಸನ್ನಿಧಿಗೆ ತೆರಳಲಿದ್ದು ಮರುದಿನ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವರ ಪಲ್ಲಕ್ಕಿಯು ಶ್ರೀ ಪದ್ಮಾವತಿ ಅಮ್ಮನವರ ದೇಗುಲಕ್ಕೆ ಬರುತ್ತದೆ.
ಶ್ರೀ ಪದ್ಮಾವತಿ ದೇವಿ ಮತ್ತು ಶ್ರೀ ವೆಂಕಟರಮಣ ದೇವರು
ಸತಿಪತಿಯರ ಪಲ್ಲಕ್ಕಿ ಉತ್ಸವವು ಪರಸ್ಪರರ ಭೇಟಿಗೆ ತೆರಳುವುದು ವಿಶೇಷವಾಗಿದೆ.
ಶ್ರೀ ದೇವಾಲಯದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಸದ್ಭಕ್ತರು ಆಗಮಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8310093198 ದೂರವಾಣಿಯನ್ನು ಸಂಪರ್ಕಿಸುವಂತೆ ಕೋರಿದೆ.