ಅಂಕೋಲಾ -ಅಂಕೋಲಾದ ಸರ್ವೇ ಇಲಾಖೆಯಲ್ಲಿ ಸಲ್ಲಿಸಿದಂತಹ ಕೋರ್ಟ್ ಡಿಕ್ರಿ ಪ್ರಕರಣಕ್ಕೆ 11ಇ ನಕ್ಷೆ. ತಯಾರಿಸಲು 1ವರ್ಷಕ್ಕೆ ಸಮೀಪ ಬಂದು ಮುಟ್ಟಿದೆ.ಈ ಬಗ್ಗೆ ಸಾರ್ವಜನಿಕರು ಸರ್ವೆ ಇಲಾಖೆಯ ಆಡಳಿತ ವೈಖರಿಯ ಬಗ್ಗೆ ಕಿಡಿಕಾರಿದ್ದಾರೆ.**ಕಳೆದ 10 ವರ್ಷದಿಂದ ಅಂಕೋಲಾ ಸರ್ವೇ ಇಲಾಖೆಯಲ್ಲಿ ರೆಗ್ಯುಲರ್ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕೊರತೆ*ಹೌದು ಕಳೆದ 10 ವರ್ಷದಿಂದ ಅಂಕೋಲಾ ತಾಲೂಕಿಗೆ ಪ್ರಭಾರಿಯಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ನಿಯೋಜಿಸಲಾಗುತ್ತಿದೆ.. ಆದರೆ ಪ್ರಭಾರಿ ಯಾಗಿ ಬಂದ ಅಧಿಕಾರಿ ಗಳೂ ವಾರಕ್ಕೆ 2ಸಲ ಸರ್ವೇ ಇಲಾಖೆಗೆ ಬಂದು ಹೋಗುವುದರಿಂದ ಅನೇಕ ಕಡತ ಗಳೂ ಸರಿಯಾದ ಸಮಯಕ್ಕೆ ಅನುಮೋದನೆ. ಕಡತಗಳು ವಿಲೇವಾರಿ ಆಗದೆ ತೀವ್ರ ಸಮಸ್ಯೆ ಉಂಟಾಗಿದೆ.
ಅಂಕೋಲಾ ತಾಲೂಕಿಗೆ ರೆಗ್ಯುಲರ್ ಭೂ ದಾಖಲೆ ಸಹಾಯಕ ನಿರ್ದೇಶಕರನ್ನು ನಿಯೋಜಿಸಬೇಕೆಂದು ಸಾರ್ವಜನಿಕರ ಅಂಬೋಣವಾಗಿದೆ.
ಅಂಕೋಲಾ ಸರ್ವೆ ಇಲಾಖೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ. ಕಚೇರಿ ಪಾರದರ್ಶಕತೆ ತೋರಲು ಸಿಸಿಟಿವಿ ಕ್ಯಾಮೆರಾ.ಹಾಗೂ ಮುಖ್ಯವಾಗಿ ಸರ್ವೇಯರ್ ಕೊರತೆ ಗಳೂ ಇದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಜರುಗಿಸಬೇಕಾಗಿದೆ.1 ಅಥವಾ 2 ತಿಂಗಳಿನಲ್ಲಿ ಆಗುವ 11ಇ ನಕ್ಷೆ ಅರ್ಜಿ ಸರ್ವೆ ಇಲಾಖೆಗೆ ಸ್ವೀಕೃತಿಯಾದ ದಿನದಿಂದ 5ರಿಂದ್ 6 ತಿಂಗಳು ತೆಗೆದುಕೊಳ್ಳುತ್ತಿದ್ದು .. ವಿಳಂಬದ ಬಗ್ಗೆ ವಿಚಾರಿಸಿದರೆ ಇಲ್ಲಿನ ನೌಕರರು ಮಾತ್ರ ತಲೆಕೆಡಿಸಿಕೊಳ್ಳದೆ. ದಿನಕ್ಕೊಂದು ಸಬುಬು ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ.
ಶಿರಕುಳಿಯ ನಾಗರಾಜ ದಾಮೋದರ ಗೋಕರ್ಣ ಎಂಬುವರು ಕಳೆದ 8 ತಿಂಗಳ ಹಿಂದೆ ಕೋರ್ಟ್ ಡಿಕ್ರಿಯ ಪ್ರಕಾರ 11ಇ ನಕ್ಷೆಗೆ ಅರ್ಜಿಯನ್ನು ಹಾಕಿದ್ದು. ಇನ್ನುವರೆಗೂ 11ಇ ಈ ನಕ್ಷೆ ಆಗದೇ ಇರುವುದರಿಂದ ಅರ್ಜಿದಾರರು ಮತ್ತು ಸಾರ್ವಜನಿಕ ರು ಸರ್ವೇ ಇಲಾಖೆಯ ಕಾರ್ಯ ವೈಖರಿ ವಿರುದ್ಧ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ 1 ತಿಂಗಳ ಹಿಂದೆ ಅಂಕೋಲ ಸರ್ವೆ ಇಲಾಖೆಗೆ ಬೇಟಿ ಕೊಟ್ಟ ಭೂ ದಾಖಲೆಗಳ ಉಪನಿರ್ದೇಶಕರಿಗೆ ಅಂಕೋಲ ಸರ್ವೆ ಇಲಾಖೆಯಲ್ಲಿ ಸಾರ್ವಜನಿಕ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ.. 11ಇ ನಕ್ಷೆಗೆ ಸಂಬಂಧಪಟ್ಟ ಪ್ರಕರಣಗಳು ತುಂಬಾ ವಿಳಂಬವಾಗುತ್ತಿದೆ. ಎಂಬುದರ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದರು. ಆ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಅಧಿಕಾರಿಗಳಿಂದಲೂ ಯಾವುದೇ ಪ್ರಯೋಜನವಾಗಲಿಲ್ಲ..
ಹಿರಿಯ ವಕೀಲ ಉಮೇಶ್ ನಾಯ್ಕರು ಅಂಕೋಲಾ ಸರ್ವೆ ಇಲಾಖೆ ಬಗ್ಗೆ ಈ ರೀತಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕಡತ್ ರೂಮ್ ನಲ್ಲಿ ಸಮಯಕ್ಕೆ ಸರಿಯಾಗಿ ದಾಖಲೆಯನ್ನು ಕೊಡುವುದಿಲ್ಲ,ಸಾರ್ವಜನಿಕರಿಗೆ ಏಕವಚನದಲ್ಲಿ ಮಾತನಾಡಿಸುವುದು ಕಂಡುಬರುತ್ತದೆ.
ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿಯ ತಿಳುವಳಿಕೆ ಕೊಡುವುದಿಲ್ಲ. ಮ್ಯಾಪ ಸಿಗ್ಲಿಲ್ಲ ಹರಿದು ಹೋಗಿದೆ. ಅವರಿಗೆ ಕೇಳಿ ಇವರಿಗೆ ಕೇಳಿ ಎಂಬ ಸಬೂಬು ಹೆಚ್ಚಾಗಿ ಅಲ್ಲಿನ ಸಿಬ್ಬಂದಿಗಳಿಂದ ಕೇಳಿ ಬಂದಿದೆ ಎಂದು ಆರೋಪಿದ್ದಾರೆ.