ಭಟ್ಕಳ-ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂಜಾಟ ನಡೆಸುವವರ ಮೇಲೆ ಪೊಲೀಸರು ನಿರಂತರ ದಾಳಿ ಮುಂದುವರೆಸಿದ್ದಾರೆ. ಭಟ್ಕಳ, ಶಿರಸಿ, ಕುಮಟಾದಲ್ಲಿ ಜೂಜಾಡುವವರನ್ನು ಸೆದೆಬಡಿದ್ದಾರೆ.
ಭಟ್ಕಳದ ಹೆಬಳೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬಳೆಯ ಹೇರೇಕೇರಿಯ ಶೇಖರ ಬಡಿಯಾ ಗೊಂಡ (30), ರಾಜೇಶ ಮಂಜು ಗೊಂಡ (40), ತೆಂಗಿನಗುoಡಿಯ ನವೀನ ಬಡಿಯಾ ಗೊಂಡ (28), ಜಗದೀಶ ಮಂಜುನಾಥ ನಾಯ್ಕ (35), ಹೆರ್ತಾರಿನ ರಾಮ ತಿಮ್ಮಪ್ಪ ಗೊಂಡ (42), ವರಕೊಡ್ಲು ನಿವಾಸಿ ಪಾಂಡು ಸಣ್ಣು ಗೊಂಡ (30), ಶಿರಾಲಿ ಚಿತ್ರಾಪುರದ ರಾಜೇಶ ತಿಮ್ಪಪ್ಪ ಗೊಂಡ (25) ಇಸ್ಪಿಟ್ ಆಡುವಾಗ ಸಿಕ್ಕಿ ಬಿದ್ದಿದ್ದಾರೆ. ಅವರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪಿಎಸ್ಐ ಭರಮಪ್ಪ ಬೆಳಗಲಿ ಪ್ರಕರಣ ದಾಖಲಿಸಿದ್ದಾರೆ.
ಕುಮಟಾದ ಗೋಕರ್ಣದ ಗಂಜಿಗದ್ದೆ ಬಳಿ ಬಂಗ್ಲೆಗುಡ್ಡೆಯ ರಾಕೇಶ ಬೋರಕರ್ ಮಟ್ಕಾ ಆಡಿಸುವಾಗ ಪೊಲೀಸ್ ನಿರೀಕ್ಷಕ ವಸಂತ ಆಚಾರ್ ದಾಳಿ ಮಾಡಿದ್ದಾರೆ. ಶಿರಸಿ ಅಗಸೆಬಾಗಿಲು ನೆಹರುನಗರದ ವ್ಯಾಪಾರಿ ಅಸ್ಲಂ ಶರೀಫ ಸಹ ಇಂದಿರಾನಗರದ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಶಿರಸಿ ಪಿಎಸ್ಐ ರತ್ನಾ ಕುರಿ ಅವರು ಅಸ್ಲಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.