ಕತಗಾಲನಲ್ಲಿ ಮಣ್ಣಿನ ಆರೋಗ್ಯ ನೀರಿನ ಸಂರಕ್ಷಣೆ ಜಲಮರುಪೂರಣ ಮತ್ತು ವಿದ್ಯುತ್ ದಕ್ಷತಾ ಪಂಪ್ಸೆಟ್ ಗಳ ಕುರಿತಾದ ಮಾಹಿತಿ ಕಾರ್ಯಗಾರ ಯಶಸ್ವಿ
ಕುಮಟ: ಕೃಷಿ ವಿಶ್ವವಿದ್ಯಾಲಯ ಧಾರವಾಡ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಉತ್ತರ ಕನ್ನಡ ಶಿರಸಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯ ನಿಯಮಿತ ಬೆಂಗಳೂರು ಸ್ಕೊಡ್ ವೆಸ್ ಸಂಸ್ಥೆ, ಶಿರಸಿ ಮತ್ತು ನಿಸರ್ಗದಾರಿ ರೈತ ಉತ್ಪಾದಕ ಕಂಪನಿಯ ಸಹಯೋಗದಲ್ಲಿ ಮಣ್ಣಿನ ಆರೋಗ್ಯ ನೀರಿನ ಸಂರಕ್ಷಣೆ ಜಲಮರುಪೂರಣ ಹಾಗೂ ವಿದ್ಯುತ್ ಧಕ್ಷತಾ ಪಂಪಸೆಟ್ ಗಳ ಕುರಿತು ಅರಿವು ಮೂಡಿಸುವ ಕಾರ್ಯಗಾರವು ಕತಗಾಲನಲ್ಲಿರುವ ಅಳಕೊಡ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು ಕಾರ್ಯಕ್ರಮವನ್ನು ಅಳಕೊಡ್ ಗ್ರಾಮ ಪಂಚಾಯತ್ ಅಧ್ಯಕ್ಷ ದೇವು ಗೌಡ ಉದ್ಘಾಟಿಸಿ ಈ ಭಾಗದ ರೈತ ಬಾಂಧವರು ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ ಕುರಿತಾದ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಸರಿಯಾಗಿ ತಿಳಿದುಕೊಂಡು ಕಾರ್ಯಗಾರದ ಸಂಪೂರ್ಣ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆವಿಕೆಯ ಹಿರಿಯ ವಿಜ್ಞಾನಿ ಮುಖ್ಯಸ್ಥೆ ಡಾಕ್ಟರ್ ರೂಪ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ಕೆವಿಕೆಯು ಕೃಷಿ ಸಂಶೋಧನೆ, ರೈತರ ಕೃಷಿ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದೆ. ರೈತರು
ಕೆವಿಕೆಯ ವಿಜ್ಞಾನಿಗಳು ಹಾಗೂ ಸಂಶೋಧಕರ ಸಹಕಾರ ಪಡೆದು ಕೃಷಿ ಸಂಬಂಧಿ ಮಾಹಿತಿ ಮತ್ತು ಅಗತ್ಯವಾದ ತರಬೇತಿಯನ್ನು ಪಡೆದುಕೊಳ್ಳಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನೀರು ಮತ್ತು ಮಣ್ಣಿನ ತಜ್ಞ ಸಾಯಿಲ್ ವಾಸು ಅವರು ರೈತರೇ ತಮ್ಮ ಮಣ್ಣಿನ ಭೌತಿಕ ಲಕ್ಷಣಗಳನ್ನು ಪರೀಕ್ಷಿಸುವ ಬಗೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದಾದ ಮಾರ್ಗೋಪಾಯಗಳು ಮತ್ತು ಕಳೆಗಳನ್ನೇ ಗೊಬ್ಬರವಾಗಿ ಪರಿವರ್ತಿಸಿಕೊಳ್ಳುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಅಲ್ಲದೇ ರೈತರು ಕೂಡ ಮಣ್ಣಿನ ಸಂರಕ್ಷಣೆ ಹಾಗೂ ಪರೀಕ್ಷಿಸುವಿಕೆ, ಜಲ ಮರುಪೂರಣದ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಸ್ಕೊಡ್ ವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿ ರೈತ ಉತ್ಪಾದಕ ಸಂಸ್ಥೆಗಳ ಕುರಿತು ಮಾಹಿತಿ ನೀಡಿದರೆ ಮಂಜುನಾಥ್ ಸಿರ್ಸಿಕರ್ ವಿದ್ಯುತ್ ದಕ್ಷತಾ ಪಂಪಸೆಟ್ ಗಳ ಕುರಿತು ಮಾಹಿತಿಗಳನ್ನು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಮಹೇಶ್ ದೇಶ ಭಂಡಾರಿ,
ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಜಾನ್ ಫರ್ನಾಂಡಿಸ್
ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾ. ಪಂ. ಸದಸ್ಯ ಶ್ರೀಧರ್ ಪೈ , ನಿಸರ್ಗಧಾರಿ ಕ ಸಂಸ್ಥೆಯ ನಿರ್ದೇಶಕ ರಾಜು ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿಸರ್ಗಧಾರಿ ರೈತ ಉತ್ಪಾದಕ ಸಂಸ್ಥೆಯ ಸಿ ಇ ಓ ಮಂಜುನಾಥ್ ಮರಾಠಿ, ಅಕೌಂಟೆಂಟ್ ಸುರೇಶ್ ಗೌಡ ಹಾಗೂ ಜಾನಕಿ, ಹಳದಿಪುರ ರೈತ ಉತ್ಪಾದಕ ಕಂಪನಿಯ ಸಿ ಇ ಓ ಆಶಾ ಭಟ್ ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.