ಕಾರವಾರ-ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೆಸರಿನಲ್ಲಿ ಹಿಂದೆ ನಕಲಿ ಫೇಸ್ಬುಕ್ ಖಾತೆ ಸೃಷ್ಠಿಯಾಗಿದೆ. ಮೂರೇ ದಿನದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನ ಅವರ ಸ್ನೇಹಿತರಾಗಿದ್ದಾರೆ!
ಮೇ 15ರಂದು ದುಷ್ಕರ್ಮಿಗಳು ಕೆ ಲಕ್ಷ್ಮೀಪ್ರಿಯಾ ಅವರ ಫೋಟೋ ಬಳಸಿ ನಕಲಿ ಖಾತೆ ತೆರೆದಿದ್ದಾರೆ. ಜಿಲ್ಲಾಡಳಿತದ ಅಧೀನದಲ್ಲಿರುವ ಜಿಲ್ಲಾಧಿಕಾರಿಗಳ ಅಸಲಿ ಖಾತೆಯಲ್ಲಿನ ಕೆಲ ಫೋಟೋಗಳನ್ನು ಇಲ್ಲಿ ಬಳಸಿಕೊಂಡಿದ್ದಾರೆ. ಅದೇ ದಿನ ರಾತ್ರಿ ಕೆ ಲಕ್ಷ್ಮೀಪ್ರಿಯಾ ಅವರ ಎರಡು ಫೋಟೋಗಳ ಜೊತೆ ಒಟ್ಟು 11 ಫೋಟೋ-ಮಾಹಿತಿಯನ್ನು ಅಪ್ಡೇಟ್ ಮಾಡಿದ್ದಾರೆ. ವಿಶೇಷ ಎಂದರೆ ಜಿಲ್ಲಾಧಿಕಾರಿ ಹೆಸರಿನ ನಕಲಿ ಖಾತೆಯಿಂದ ಈವರೆಗೂ ಯಾರಲ್ಲಿಯೂ ಹಣ ಕೇಳಿದ ವರದಿ ಆಗಿಲ್ಲ.
ಸಾಮನ್ಯವಾಗಿ ಸೈಬರ್ ಕ್ರೆö ನಡೆಸುವವರು ಗಣ್ಯರ ಹೆಸರಿನಲ್ಲಿ ಖಾತೆ ಸೃಷ್ಠಿಸಿದ ಮರುಕ್ಷಣದಿಂದಲೇ ಹಣ ಬೇಡಲು ಶುರು ಮಾಡುತ್ತಾರೆ. ಆದರೆ, ಕೆ ಲಕ್ಷ್ಮೀಪ್ರಿಯಾ ಅವರ ಹೆಸರಿನಲ್ಲಿ ಖಾತೆ ರಚನೆಯಾದ ನಂತರ ಅದರಲ್ಲಿ ಸ್ನೇಹಿತರ ಸಂಖ್ಯೆ ಹೆಚ್ಚಳ ಮಾಡಿಕೊಳ್ಳುವ ಬಗ್ಗೆ ಮಾತ್ರ ವಿಶೇಷ ಗಮನ ನೀಡಲಾಗಿದ್ದು, ಮೂರು ದಿನಗಳ ಹಿಂದೆ 918 ಜನ ಸ್ನೇಹಿತರನ್ನು ಹೊಂದಿದ್ದ ಈ ಖಾತೆಯಲ್ಲಿ ಇದೀಗ 4900 ಜನ ಸ್ನೇಹಿತರಾಗಿದ್ದಾರೆ.
ಮೇ 15ರ ನಂತರ ಈ ನಕಲಿ ಖಾತೆಯಲ್ಲಿ ಅಡ್ಮಿನ್ ಕಡೆಯಿಂದ ಯಾವುದೇ ಅಪ್ಡೇಟ್ ಆಗಿಲ್ಲ. ಸ್ನೇಹದ ಕೋರಿಕೆಯನ್ನು ಸ್ವೀಕರಿಸುವ ಕೆಲಸವನ್ನು ಮಾತ್ರ ದುಷ್ಕರ್ಮಿಗಳು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಯಾಗಿರುವುದನ್ನು ಉತ್ತರ ಕನ್ನಡ ಪೊಲೀಸ್ ಘಟಕ ಪತ್ತೆ ಮಾಡಿದೆ. ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಪಾಕ್ಟ್ಚಕ್ ಮೂಲಕ ಪೊಲೀಸರು ನಕಲಿ ಖಾತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾಡಳಿತ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದು, ಈಗಾಗಲೇ ಜಿಲ್ಲಾಡಳಿತದ ಹೆಸರಿನಲ್ಲಿDeputy Commissioner Uttara Kannada ಎಂಬ ಫೇಸ್ಬುಕ್ ಖಾತೆ ಇದೆ. 23 ಸಾವಿರಕ್ಕೂ ಅಧಿಕ ಜನ ಆ ಖಾತೆ ಹಿಂಬಾಲಿಸಿ ಮಾಹಿತಿ ಪಡೆಯುತ್ತಿದ್ದಾರೆ.