ಭಟ್ಕಳ – ಬೆಂಗಳೂರಿನ ಪ್ರತಿಷ್ಠಿತ ಸಿನಿ ಪತ್ರಿಕೆ ಚಿತ್ರಸಂತೆ ಅವರಿಂದ ಜಿಲ್ಲೆಯ ಪ್ರತಿಭಾನ್ವಿತ ಬರಹಗಾರ ಲೇಖಕ ,ಸ್ವರ ಸಂಯೋಜಕ ಗಾಯಕ ಉಮೇಶ ಮುಂಡಳ್ಳಿ ಯವರಿಗೆ
೨೦೨೫ ರ “”ವರ್ಷದ ಕನ್ನಡಿಗ”” ಕರ್ನಾಟಕ ಅಚೀವರ್ಸ್ ಅವಾರ್ಡ್ ಪ್ರಶಸ್ತಿ ನೀಡಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ಅವರು ಕಳೆದ ಇಪ್ಪತೈದು ವರ್ಷಗಳಿಂದ ಸಾಹಿತ್ಯ ಸಂಗೀತ ಸೇವೆಯನ್ನು ಜೊತೆಜೊತೆಗೆ ನಡೆಸಿಕೊಂಡು ಬರುತ್ತಿದ್ದು ಮೌನಗೀತೆ, ಭಾವಸುಮ, ಕರುನಾಡ ಕುಡಿಗಳು,ನಾನೂ ಶಿಲ್ಪವಾಗಬೇಕು, ಹಾಗೂ ತಿಂಗಳ ಬೆಳಕು ( ಹನಿಕವನ) ಎನ್ನುವ ಕವನ ಸಂಕಲನಗಳನ್ನು, ಬೆಂಕಿ ಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, ಉತ್ತರ ಕನ್ನಡಕ್ಕೆ ಒಂದು ಸುತ್ತು ಪ್ರವಾಸಿ ಲೇಖನ, ಮಾತಾ ಮಹಿಮಾ ಹಾಗೂ ಹನುಮಾಮೃತ ಎನ್ನುವ ಭಕ್ತಿ ಪ್ರಧಾನ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದು, ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅನೇಕ ಮೌಲ್ಯಭರಿತ ಲೇಖನಗಳನ್ನು ಬರೆಯುತ್ತಾ ಬರುತ್ತಿದ್ಸಾರೆ.
ಸಂಗೀತ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಮುಂಡಳ್ಳಿಯವರು ಜಿಲ್ಲೆ ಹೊರಜಿಲ್ಲೆ ಹಾಗೂ ಗಡಿ ರಾಜ್ಯಗಳಲ್ಲೂ ಭಕ್ತಿ ಸಂಗೀತ, ಸುಗಮ ಸಂಗೀತ ಕಾರ್ಯಕ್ರಮ ನೀಡುವುದರೊಂದಿಗೆ ತಮ್ಮದೇ ಸ್ವರಚಿತ ಭಾವಗೀತೆ ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಗಳ ಜೊತೆ ರಾಜ್ಯದ ಅನೇಕ ಹಿರಿ ಹಿರಿಯ ಕವಿಗಳ ಕವಿತೆಗಳೂ ಸೇರಿದಂತೆ ಇದುವರೆಗೆ ಸುಮಾರು ಮೂವತ್ತೈದಕ್ಕೂ ಹೆಚ್ಚಿನ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ತಾವು ಹಾಡುವುದರ ಜೊತೆಗೆ ಇತರೆ ಗಾಯಕರಿಗೂ ಅವಕಾಶ ನೀಡಿದ್ದಾರೆ. ಭರವಸೆಯ ಛಾಯೆ, ಮುಂಡಳ್ಳಿ ಭಕ್ತಿ ಗಾನ ಮಾಲಾ,ಅಯೋಧ್ಯಾ ಶ್ರೀ ರಾಮನ ಭಕ್ತಿಗೀತೆ ಗಳು ಇವರ ಸಂಯೋಜನೆಯ ಜನಪ್ರಿಯ ಧ್ವನಿಮುದ್ರಿಕೆಗಳು. ಇವರ “ಭರವಸೆಯ ಛಾಯೆ” ೨೦೧೧ ರಲ್ಲಿ ಹಿರಿಯ ಸಾಹಿತಿ ಪಾಟಿಲ್ ಪುಟ್ಟಪ್ಪನರು ಲೋಕಾರ್ಪಣೆ ಮಾಡಿರುವುದು ವಿಶೇಷವಾಗಿದೆ.ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಸಂಗೀತ ಸಾಹಿತ್ಯ ಮೇಳೈಸಿರುವ ಜಿಲ್ಲೆಯ ಅಪ್ಪಟ ಗ್ರಾಮೀಣ ಪ್ರತಿಭೆ ಉಮೇಶ ಮುಂಡಳ್ಳಿಯವರನ್ನು ಸ್ಯಾಂಡಲ್ ವುಡ್ ಪತ್ರಿಕೆ ಚಿತ್ರಸಂತೆ ಗುರುತಿಸಿ ವರ್ಷದ ಕನ್ನಡಿಗ ೨೦೨೫ ಕರ್ನಾಟಕ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರು ಸದಾಶಿವ ನಗರದಲ್ಲಿರುವ ಹೈಡ್ ಪಾರ್ಕ್ ಖಾಸಗಿ ಹೊಟೆಲ್ ನಲ್ಲಿ ಶನಿವಾರ ನಡೆದ ಚಿತ್ರಸಂತೆ ಸಮಾರಂಭದಲ್ಲಿ ಮುಂಡಳ್ಳಿ ಯವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿರುತ್ತದೆ. ಜೊತೆಗೆ ಜನಪ್ರಿಯ ವೈದ್ಯರು, ಸಂಶೋಧಕರು, ಇಸ್ರೋ ವಿಜ್ಞಾನಿಗಳು, ಸಿನಿಮಾ ನಟರು,ತಂತ್ರಜ್ಞರು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಾದ ರಾಜ್ಯದ ಅನೇಕ ಸಾಧಕರಿಗೂ ಈ ಸಂಧರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲು ವಿಶೇಷವಾಗಿ ಮುಖ್ಯ ಅತಿಥಿಯಾಗಿ ಜನಪ್ರಿಯ ಚಿತ್ರನಟಿ ಅನುಷಾ ರೈ ಉಪಸ್ಥಿತರಿದ್ದರು. ಅತಿಥಿಗಳಾಗಿ ನಕ್ಷತ್ರ ನಾಡಿ ಖ್ಯಾತಿಯ ಜ್ಯೋತಿಷಿ ವಾಸ್ತು ಶಾಸ್ತ್ರಜ್ಞ ಡಾ.ದಿನೇಶ್ ಗುರೂಜಿ ನಟ ಮದನ್ ಹಾಜರಿದ್ದರು. ಚಿತ್ರಸಂತೆ ಪತ್ರಿಕಾ ಬಳಗದ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮ ಸಂಪೂರ್ಣವಾಗಿ ನಿರ್ವಹಿಸಿದರು.