ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಒತ್ತಾಯಿಸಿ ಪೆ. 5 ರಂದು ಕುಮಟಾದಿಂದ -ಭಟ್ಕಳ ವರೆಗೆ 3 ದಿನಗಳ ಸ್ವಾಭಿಮಾನದ ಪಾದೆಯಾತ್ರೆ ಗೆ ಸರ್ವರಿಗೂ ಸ್ವಾಗತ- ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ
ಭಟ್ಕಳ -ಜನರ ಜೀವ ಉಳಿಸುವ ದೃಷ್ಟಿಯಿಂದ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು ಅದನ್ನು ನಿರ್ಮಾಣ ಮಾಡಲು ತಕ್ಷಣ ಸರ್ಕಾರ ಹಣ ಮಂಜೂರು ಮಾಡಬೇಕು ಎಂದು ಒತಾಯಿಸಿ ಫೆ. ೫ ರಂದು ಕುಮಟಾದಲ್ಲಿ ಈ ಹಿಂದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ, ಪಾದಯಾತ್ರೆ ಪ್ರಾರಂಭಿಸುತ್ತೇವೆ. ಮೂರು ದಿನದಲ್ಲಿ ಫೆ 7 ಕ್ಕೆಭಟ್ಕಳವನ್ನು ತಲುಪಿ,ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ಮನವಿ ನೀಡಲಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.ಪಕ್ಷಾತೀತವಾಗಿ ಉತ್ತರ ಕನ್ನಡದ ಜನತೆಯ ಸ್ವಾಭಿಮಾನದ ಈ ಪಾದಾಯಾತ್ರೆಗೆ ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.