ಬೆಂಗಳೂರು-ಬೆಂಗಳೂರು ನಗರ ಜಿಲ್ಲೆ ಟಿ ದಾಸರಹಳ್ಳಿ ಕ್ಷೇತ್ರದಲ್ಲಿ ಬರುವ ಸರ್ಕಾರಿ ಆಸ್ಪತ್ರೆ ಮಲ್ಲಸಂದ್ರದಲ್ಲಿ ಆಸ್ಪತ್ರೆಗೆ ಬರುವ ಬಡರೋಗಿಗಳ ಬಳಿ ಹಣ ಪೀಕುವ ಕೆಲಸವು ರಾಜಾರೋಷವಾಗಿ ನಡೆಯುತ್ತಿದೆ, ಸರ್ಕಾರಿ ಆಸ್ಪತ್ರೆಗೆ ಸದೃಢ ಪ್ರಮಾಣ ಪತ್ರಕ್ಕೆಂದು (ಫಿಟ್ನೆಸ್ ಸರ್ಟಿಫಿಕೇಟ್ )ಬರುವ ಸಾರ್ವಜನಿಕರ ಬಳಿ ತಲಾ ಒಬ್ಬರಿಗೆ ರೂ.300ಯಂತೆ ಹಣ ವಸೂಲಿಗೆ ಹಿಳಿದ ಬಾಗಲಗುಂಟೆ ಸಮೀಪದಲ್ಲಿರುವ ಮಲಸಂದ್ರ ಸರ್ಕಾರಿ ಹೆರಿಗೆ ಆಸ್ಪತ್ರೆಯ ಸರ್ಕಾರಿ ವೈದ್ಯರಾದ ಡಾ.ಮಂಜುನಾಥ್ ಲಂಚಾವತಾರ ಬಯಲಿಗೆ ಬಂದಿದೆ.
ಬಡವರು, ದೀನರು, ನಿರಾಶ್ರಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಾಗೂ ಒಬ್ಬ ಸಾರ್ವಜನಿಕರಿಗೂ ಕೂಡ ಉಚಿತವಾದ ಚಿಕಿತ್ಸೆ ದೊರಕಲಿ ಎಂಬ ಉದ್ದೇಶದಿಂದ ಸರ್ಕಾರವು ಸರ್ಕಾರಿ ಆಸ್ಪತ್ರೆಗಳನ್ನ ತೆರೆದಿದ್ದು ಆದರೆ ಇಂತಹ ವೈದ್ಯರು ಬಡವರ ಬಳಿ ಹಣ ವಸೂಲಿ ಮಾಡುತ್ತಿರುವುದು ಬಹಳ ನಾಚಿಕೆಗೇಡಿನ ಸಂಗತಿಯಾಗಿದೆ, ಈ ವಿಚಾರವೂ ನಮ್ಮ ಗಮನಕ್ಕೆ ಬಂದ ತಕ್ಷಣವೇ ಸಂಬಂಧಪಟ್ಟ ವೈದ್ಯರಿಗೆ ಕರೆ ಮಾಡಿ ಸತ್ಯಾಸತ್ಯದ ಬಗ್ಗೆ ಕೇಳಿದಾಗ ಅವರು ಹಣ ಪಡೆದಿರುವುದು ಸತ್ಯವೆಂಬುದಾಗಿ ಖುದ್ದು ಸರ್ಕಾರಿ ವೈದ್ಯರಾದ ಡಾ. ಮಂಜುನಾಥ್ ರವರೇ ಒಪ್ಪಿಕೊಂಡಿರುತ್ತಾರೆ ಅದರ ಕಾಲ್ ರೆಕಾರ್ಡಿಂಗ್ ಕೂಡ ಮಾಡಿರುತ್ತೇವೆ ಮತ್ತು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅಂದರೆ ದಿನಾಂಕ: 12.12.2024 ರಂದು ಬಿಬಿಎಂಪಿಯ ಬೆಂಗಳೂರು ನಗರ ಆರೋಗ್ಯ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣದ ಮುಖೇನ ನೀಡುವುದರ ಜೊತೆಗೆ ಸಾಕ್ಷಾಧಾರವಾದ ವಿಡಿಯೋವನ್ನು ಕೂಡ ರವಾನೆ ಮಾಡುವ ಜೊತೆಗೆ ದಿನಾಂಕ : 13.12.2024ರಂದು ಆರೋಗ್ಯ ಇಲಾಖೆಯ ಆಯುಕ್ತ ಇಲಾಖೆ ಕುದ್ದು ಭೇಟಿ ನೀಡಿ ಆಯುಕ್ತಲಯದಲ್ಲಿ ಲಿಖಿತವಾಗಿ ದೂರು ನೀಡುವ ಜೊತೆಗೆ ಸಾಕ್ಷಾಧಾರಗಳ ಸಿಡಿ ಯನ್ನು ಕೂಡ ನೀಡಿರುತ್ತೇವೆ, ಅಲ್ಲದೆ ಲಂಚ ಪಡೆದ ಈ ಸರ್ಕಾರಿ ವೈದ್ಯರನ್ನ ಕರ್ತವ್ಯದಿಂದ ಅಮಾನತ್ತು ಮಾಡದಿದ್ದಲ್ಲಿ ಆರೋಗ್ಯ ಇಲಾಖೆಯ ವಿರುದ್ಧ ಮಟ್ಟದ ಹೋರಾಟವನ್ನು ಮಾಡುತ್ತೇವೆ ಎಂದು ದೂರುದಾರರಾದ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ತಿಳಿಸಿದ್ದಾರೆ.