ಕುಮಟ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ಅರಣ್ಯ ಹಕ್ಕು ಸಮಿತಿಯು ಅಸ್ತಿತ್ವವಿಲ್ಲದ ಸಮಿತಿಯಿಂದ ೧೯೩೦ ರ ದಾಖಲೆಯನ್ನ ಸಲ್ಲಿಸಲು ಸೂಚನಾ ಪತ್ರ ನೀಡಿ ವಿಚಾರಣೆ ಪ್ರಕ್ರಿಯೆ ಜರುಗುತ್ತಿರುವದಕ್ಕೆ ಸಾರ್ವತ್ರಿಕವಾಗಿ ಅರಣ್ಯವಾಸಿಗಳು ಆಕ್ಷೇಪಣಾ ಪತ್ರ ಜ.೧೩ ಸೋಮವಾರದಂದು ಜರುಗಿಸಲು ನಿರ್ಧರಿಸಲಾಗಿದೆ ಎಂದು ಕುಮಟ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಮಟ ತಾಲೂಕಿನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆಯಲ್ಲಿ ಇಂದು ಮಾಸ್ತಿಕಟ್ಟಾ ಸಂಭಾಗಣದಲ್ಲಿ ಜರುಗಿದ ತಾಲೂಕಾ ಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಟ ಉಪವಿಭಾಗ ಅರಣ್ಯ ಹಕ್ಕು ಸಮಿತಿ ಮತ್ತು ಗ್ರಾಮ ಅರಣ್ಯ ಹಕ್ಕು ಸಮಿತಿಗಳು ಮೂರು ತಲೆಮಾರಿನ ಪೂರ್ವದಿಂದ ಅಂದರೆ ೧೯೩೦ ರ ಇಸ್ವಿಯ ಅರಣ್ಯದಲ್ಲಿ ವಾಸಿಸಿರುವ ಮತ್ತು ಅವಲಂಬಿತವಾಗಿರುವ ಧೃಡಿಕೃತ ದಾಖಲೆಗಳನ್ನ ಮತ್ತು ವಾಸ ಮಾಡುತ್ತಿರುವ ಅರಣ್ಯ ಜಮೀನಿನ ಕಬ್ಜ ಹೊಂದಿರುವ ಬಗ್ಗೆ ದಾಖಲೆಗಳಿಗೆ ಹಾಜರ ಮಾಡಲು ಕಾನೂನು ವ್ಯತಿರಿಕ್ತವಾಗಿ ನೋಟೀಸ್ ನೀಡುತ್ತಿರುವದಕ್ಕೆ ಆಕ್ಷೇಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಮಹೇಂದ್ರ ನಾಯ್ಕ ಕತಗಾಲ, ರಾಜು ನರೇಬೈಲ್ ಅರವಿಂದ ಗೌಡ ಸಭೆಯಲ್ಲಿ ಮಾತನಾಡುತ್ತಾ ಕಾನೂನು ಬದ್ಧವಾಗಿ ಆಕ್ಷೇಪಣಾ ಪತ್ರ ಸಲ್ಲಿಸುವದ್ದು ಅರಣ್ಯವಾಸಿಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಸೀತರಾಮ ನಾಯ್ಕ ಬುಗರಿಬೈಲ್, ಸಾರಾಂಬಿ ಬೆಟ್ಕುಳಿ, ಯಾಕುಬ ಸಾಬ ಬೆಟ್ಕುಳಿ, ಜಗದೀಶ ಹರಿಕಾಂತ ನುಶಿಕೋಟೆ, ಸುನೀತಾ ಹರಿಕಾಂತ ಕಿಮಾನಿ, ಶಂಕರ ಗೌಡ ಕಂದವಳ್ಳಿ ಉಪಸ್ಥಿತರಿದ್ದರು.
ಸಹಸ್ರಾರು ಆಕ್ಷೇಪಣೆ:
ಸಹಸ್ರಾರು ಸಂಖ್ಯೆಯಲ್ಲಿ ಆಕ್ಷೇಪಣಾ ಪತ್ರ ಜನವರಿ ೧೩ ರಂದು ಉಪವಿಭಾಗ ಕಛೇರಿಯಲ್ಲಿ ಸಲ್ಲಿಸಲಾಗುವದು ಎಂದು ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು ಅವರು ತಿಳಿಸಿದ್ದಾರೆ.