
ಭಟ್ಕಳ:ಶಹರದ ಹೂವಿನ ಚೌಕ್ ಸಮೀಪದ ದುಬೈ ಮಾರ್ಕೆಟ್‌ನಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ಸಿಗರೇಟಿಗೆ ಬಳಸುವ ನಿಕೋಟಿನ್ ಲಿಕ್ವಿಡ್ ರಿಫಿಲ್ (Vapes)ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಭಟ್ಕಳ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಕಾರಗದ್ದೆ ನಿವಾಸಿ ಸಿದ್ದಿಕ್ ಅಬ್ದುಲ್ ರೆಹಮಾನ್ @ ಮಸ್ತಾನ್ (58), ತಂದೆ ಸಿದ್ದಿಕ್ ಖಾದಿರ ಮೀರಾ ಎಂದು ಗುರುತಿಸಲಾಗಿದೆ.

ಜನವರಿ 1ರಂದು ರಾತ್ರಿ 10.30 ಗಂಟೆ ಸುಮಾರಿಗೆ, ಹೂವಿನ ಚೌಕ್‌ನ ದುಬೈ ಮಾರ್ಕೆಟ್‌ನಲ್ಲಿರುವ ತನ್ನ ಅಂಗಡಿಯಲ್ಲಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೆ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ಆರೋಪಿಯ ಅಂಗಡಿಯಿಂದ
₹76,000 ಮೌಲ್ಯದ 38 ಎಲೆಕ್ಟ್ರಾನಿಕ್ ಸಿಗರೇಟ್‌ಗಳು,
₹62,500 ಮೌಲ್ಯದ 125 ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳು
ಒಟ್ಟು ₹1,38,500 ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಭಟ್ಕಳ ಉಪ ಪೊಲೀಸ್ ಅಧೀಕ್ಷಕ ಮಹೇಶ ಎಂ.ಕೆ. ಅವರ ಮಾರ್ಗದರ್ಶನದಲ್ಲಿ, ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ನಡೆಸಲಾಗಿದ್ದು,ಪಿಎಸ್ಐ ನವೀನ ನಾಯ್ಕ ಹಾಗೂ ಸಿಬ್ಬಂದಿಗಳಾದಸಿ.ಎಚ್.ಸಿ ಉದಯ ನಾಯ್ಕ, ಸಿ.ಎಚ್.ಸಿ ದೀಪಕ ನಾಯ್ಕ,ಸಿ.ಪಿ.ಸಿ ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ,ಸಿ.ಪಿ.ಸಿ ಸುರೇಶ್ (1008), ರೇವಣಸಿದ್ದಪ್ಪ ಮಾಗಿ,ಸಿ.ಪಿ.ಸಿ ಜಗದೀಶ ನಾಯ್ಕ ಹಾಗೂ ಸಿ.ಪಿ.ಸಿ ಸುರೇಶ್ ಮರಾಠಿಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

