
ಚಿಕ್ಕೋಡಿ -ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪ ನಿಪ್ಪಾಣಿ ಪಟ್ಟಣದಲ್ಲಿ ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಘಟನೆ ನಡೆದಿದೆ.

ಕಳ್ಳರು ಮನೆಯಲ್ಲಿ ಯಾರು ಇಲ್ಲ ಎಂಬ ವಿಚಾರವನ್ನು ಖಚಿತಪಡಿಸಿಕೊಂಡೇ ಕಳ್ಳತನ ಮಾಡಲು ಬಂದಿದ್ದರು. ಇನ್ನೂ ನ್ಯಾಯಾಧೀಶರ ಮನೆಯೊಳಗಿದ್ದ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಂದ ಕಾಲು ಕಿತ್ತಿದ್ದಾರೆ.

ಮಾಹಿತಿ ತಿಳಿದು ನಿಪ್ಪಾಣಿ ಪೊಲೀಸರು ಘಟನಾ ಸ್ಥಳಕ್ಕೆ ಶ್ವಾನ ದಳದ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

