ಭಟ್ಕಳ-ಭಟ್ಕಳ ತಾಲೂಕ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ತೇಜಸ್ ನಾಯ್ಕ ಅವರು ಇಂದು ಮೀನುಗಾರಿಕೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಸಲ್ಲಿಸಿದರು. ಈ ವೇಳೆ ಭಟ್ಕಳ ತಾಲೂಕ ನೂತನ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ತೇಜಸ್ ನಾಯ್ಕ ಅವರನ್ನು ಸಚಿವರು ಅಭಿನಂದಿಸಿ ,ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಯುವ ಕಾಂಗ್ರೆಸ್ ಪಕ್ಷವನ್ನು ಭಟ್ಕಳ ಕ್ಷೇತ್ರದಲ್ಲಿ ಮತ್ತಷ್ಟು ಯಶಸ್ಸು ಸಾಧಿಸವಂತೆ ಮಾಡುವಂತೆ ತಿಳಿಸಿ ಶುಭಕೋರಿದರು.