ಹೊನ್ನಾವರ-ಶರಾವತಿ ಸೇತುವೆ ಮೇಲೆ ಸಾವಿನ ಸರಣಿ ಮುಂದುವರೆದಿದೆ. ಬುಧವಾರ ಬೆಳಗ್ಗೆ ಸಹ ಬೈಕ್ ಸವಾರರೊಬ್ಬರು ಇಲ್ಲಿ ಸಾವನಪ್ಪಿದ್ದಾರೆ.
ಗೋಕರ್ಣದ ಸಾಣಕಟ್ಟೆ ಬಳಿಯ ತೊರೆಗಜನಿಯ ಗಣಪತಿ ಹರಿಕಂತ್ರ ಅವರು ಹೊನ್ನಾವರ ತಾಲೂಕಿನ ಶರಾವತಿ ಸೇತುವೆ ಮೇಲೆ ಬೈಕ್ ಓಡಿಸುತ್ತಿದ್ದರು. ಅಪರಿಚಿತ ವಾಹನ ಗುದ್ದಿದ್ದರಿಂದ ಅವರು ಅಲ್ಲಿಯೇ ಕೊನೆ ಉಸಿರೆಳೆದರು. ಮಂಕಿ ಜಾತ್ರೆಗೆ ಹೋಗಿದ್ದ ಗಣಪತಿ ಹರಿಕಂತ್ರ ಅವರು ಅಲ್ಲಿಂದ ಊರಿಗೆ ಮರಳುವ ವೇಳೆ ಈ ಅವಘಡ ನಡೆದಿದೆ.
ಎರಡು ತಿಂಗಳ ಹಿಂದೆಯೂ ಇಲ್ಲಿ ಅಪಘಾತ ನಡೆದಿದ್ದು, ಮೂವರು ಸಾವನಪ್ಪಿದ್ದರು. ಎರಡು ವಾರದ ಹಿಂದೆ ಮುರುಡೇಶ್ವರ ಜಾತ್ರೆಗೆ ತೆರಳಿದ್ದ ಹಳದಿಪುರದ ಯುವತಿ ಸಾವನಪ್ಪಿದ್ದರು. ಇದೀಗ ಬುಧವಾರ ಬೆಳಗ್ಗೆ ಗಣಪತಿ ಹರಿಕಂತ್ರ ಸಹ ಅದೇ ಸೇತುವೆ ಮೇಲೆ ಜೀವ ಬಿಟ್ಟಿದ್ದಾರೆ.