ಅಕ್ರಮ ದಂಧೆ ಗೆ ಸಹಕಾರ ನೀಡಿ ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪಿಎಸ್ ಐ ಜಕ್ಕಣ್ಣನವರ್ ಅಮಾನತು(ಸಸ್ಪೆನ್ಡ್)
ಚಿಕ್ಕಮಗಳೂರು-ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪಿಎಸ್ ಐ ಜಕ್ಕಣ್ಣನವರ್ ಅವರನ್ನು ಅಮಾನತು ಮಾಡಲಾಗಿದೆ.
ಹಲವು ಪ್ರಕರಣಗಳಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ
ಜಕ್ಕಣ್ಣನವರ್ ಅವರನ್ನು ಪಶ್ಚಿಮ ವಲಯ ಐಜಿಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಅಕ್ರಮ ಮರಳು ದಂಧೆ, ಇಸ್ಪೀಟ್ ಅಡ್ಡೆ ರೈಡ್ ಸೇರಿ ಕರ್ತವ್ಯಲೋಪವೆಸಗಿದ ಆರೋಪ ಜಕ್ಕಣ್ಣನವರ್ ಅವರ ಮೇಲಿದೆ. ಶೃಂಗೇರಿ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಮರಳು ದಂಧೆ,ಅಕ್ರಮ ಮರಳು ದಂಧೆಗೆ ಬೆಂಬಲ ನೀಡಿದ ಅರೋಪ ಅವರ ಈ ಪಿ.ಎಸ್.ಈ ಮೇಲಿದೆ.