• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Tuesday, February 3, 2026
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಟಿವಿ ಕಾರ್ಯಕ್ರಮಗಳ ಮೂಲಕ ಖ್ಯಾತಿ ಪಡೆದಿದ್ದ ಕಮಲಾಕರ ಭಟ್ಟ ಕೊಲೆ ಪ್ರಕರಣದಲ್ಲಿ ಬಂಧನ

Kannada News Desk by Kannada News Desk
February 3, 2026
in ಉತ್ತರ ಕನ್ನಡ
0
ಟಿವಿ ಕಾರ್ಯಕ್ರಮಗಳ ಮೂಲಕ ಖ್ಯಾತಿ ಪಡೆದಿದ್ದ ಕಮಲಾಕರ ಭಟ್ಟ ಕೊಲೆ ಪ್ರಕರಣದಲ್ಲಿ ಬಂಧನ
0
SHARES
1
VIEWS
WhatsappTelegram Share on FacebookShare on TwitterLinkedin


ಸಿದ್ದಾಪುರ:ಟಿವಿ ಕ್ಯಾಮರಾ ಎದುರು ಭವಿಷ್ಯ ನುಡಿದು ಪರಿಚಿತ ಮುಖವಾಗಿದ್ದ ಕಮಲಾಕರ ಭಟ್ಟ ಅವರು ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಚೇರಿಯ ಕೆಲಸದಾಕೆಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ ಹಾಗೂ ಕುಟುಂಬದ ಒಳಜಗಳ ಈ ಭೀಕರ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಿದ್ದಾಪುರ ತಾಲೂಕಿನ ಮಹೇಶ ಜಟ್ಟಾ ನಾಯ್ಕ ಅವರು ಸುಮಾರು 20 ವರ್ಷಗಳ ಹಿಂದೆ ಸುಚಿತ್ರಾ ನಾಯ್ಕ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಎಂಬ ಇಬ್ಬರು ಪುತ್ರಿಯರಿದ್ದು, ಕುಟುಂಬದೊಂದಿಗೆ ಬೆಳ್ಳಟ್ಟೆಯ ವಡ್ನಗದ್ದೆಯಲ್ಲಿ ವಾಸವಾಗಿದ್ದರು.ಇದೇ ಸಂದರ್ಭದಲ್ಲಿ ಸುಚಿತ್ರಾ ನಾಯ್ಕ ಅವರಿಗೆ ಕಮಲಾಕರ ಭಟ್ಟ ಅವರ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ ಎನ್ನಲಾಗಿದೆ. ಮಹೇಶ ನಾಯ್ಕ ಅವರು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಿದಾಗ, ಸುಚಿತ್ರಾ ನಾಯ್ಕ ಅವರು ಕಮಲಾಕರ ಭಟ್ಟ ಅವರ ಶಿವಮೊಗ್ಗದ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು.


ಆರೋಪದಂತೆ, ಸುಚಿತ್ರಾ ನಾಯ್ಕ ಹಾಗೂ ಕಮಲಾಕರ ಭಟ್ಟ ಅವರು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಅತಂತ್ರಗೊಂಡ ಸುಮಶ್ರೀ ಅವರು ತಮ್ಮ ತಂದೆಗೆ ಮೆಸೇಜ್ ಕಳುಹಿಸಿ, “ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ, ಇಲ್ಲವಾದರೆ ಪ್ರಾಣಾಪಾಯ” ಎಂದು ಮನವಿ ಮಾಡಿಕೊಂಡಿದ್ದರು.
ಈ ಸಂದೇಶದ ಬೆನ್ನಲ್ಲೇ ಮಹೇಶ ನಾಯ್ಕ ಅವರು ಮಗಳನ್ನು ಸಿದ್ದಾಪುರಕ್ಕೆ ಕರೆಸಿಕೊಂಡು, ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಮಕ್ಕಳ ಮೇಲಾದ ಹಿಂಸೆಯ ಬಗ್ಗೆ ದೂರು ಸಲ್ಲಿಸಿದ್ದರು.


ದೂರು ನೀಡಿದ ಬಳಿಕ ಮಹೇಶ ನಾಯ್ಕ ಅವರು ತಮ್ಮ ಮಗಳು ಜೊತೆ ಅಣ್ಣ ವಸಂತ ನಾಯ್ಕ ಅವರ ಅವರೆಕೊಪ್ಪದ ಮನೆಗೆ ತೆರಳಿದರು. ಅಲ್ಲಿ ಪತ್ನಿಯಿಂದ ಅನುಭವಿಸಿದ್ದ ಕಿರುಕುಳ ಹಾಗೂ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸುಮಶ್ರೀ ಅವರು ಕೂಡ ತಾಯಿಯ ಅಕ್ರಮ ಸಂಬಂಧ ಹಾಗೂ ತಮಗಾದ ತೊಂದರೆಗಳ ಬಗ್ಗೆ ವಿವರಿಸಿದರು.


ಆದರೆ, ಅದೇ ದಿನ ರಾತ್ರಿ ಸುಚಿತ್ರಾ ನಾಯ್ಕ, ಅವರ ತಂದೆ ಲೋಕನಾಥ ನಾಯ್ಕ, ಕಮಲಾಕರ ಭಟ್ಟ ಹಾಗೂ ಇನ್ನೂ ನಾಲ್ವರು ಅಪರಿಚಿತರು ವಸಂತ ನಾಯ್ಕ ಅವರ ಮನೆಗೆ ದಾಳಿ ನಡೆಸಿದ್ದಾರೆ. ಅಪರಿಚಿತರು ಕೈಯಲ್ಲಿ ಚಾಕು ಹಿಡಿದು ಬಂದಿದ್ದು, ಸುಮಶ್ರೀ ಅವರನ್ನು ಭಯಪಡಿಸಿ ಕೋಣೆಯಲ್ಲಿ ಬಂದಿಸಿದ್ದರು ಎಂದು ಆರೋಪಿಸಲಾಗಿದೆ.
ಘಟನೆಯನ್ನು ತಡೆಯಲು ಮುಂದಾದ ವಸಂತ ನಾಯ್ಕ ಅವರ ಮೇಲೆ ಚಾಕು ದಾಳಿ ನಡೆದಿದ್ದು, ಅವರು ಸ್ಥಳದಲ್ಲೇ ಕುಸಿದುಬಿದ್ದರು. ಮಧ್ಯಪ್ರವೇಶಕ್ಕೆ ಬಂದ ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಎಂಬವರಿಗೆ ಕೂಡ ಗಂಭೀರ ಗಾಯಗಳಾಗಿವೆ. ಈ ವೇಳೆ ವಸಂತ ನಾಯ್ಕ ಅವರ ಪತ್ನಿ ಸಂಧ್ಯಾ ನಾಯ್ಕ ಅವರು ಪೊಲೀಸರಿಗೆ ಕರೆ ಮಾಡಲು ಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಪಕ್ಕದ ಮನೆಯವರು ಹಾಗೂ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ವಸಂತ ನಾಯ್ಕ ಅವರ ಸಾವನ್ನು ದೃಢಪಡಿಸಿದರು. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕೊಲೆ ಹಾಗೂ ಹಲ್ಲೆ ಪ್ರಕರಣದ ವೇಳೆ ಕಮಲಾಕರ ಭಟ್ಟ ಅವರು ಕಾರಿನಲ್ಲೇ ಇದ್ದು, ಘಟನೆಯಲ್ಲಿ ಅವರ ಪಾತ್ರ ಹಾಗೂ ಕುಮ್ಮಕ್ಕು ಇದೆ ಎಂದು ಸಂಧ್ಯಾ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಮಲಾಕರ ಭಟ್ಟ ಸೇರಿದಂತೆ ಆರು ಮಂದಿ ಸಹಚರರನ್ನು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ನಾಲ್ಕು ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆ.ಪಿ.ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ

Kannada News Desk

Kannada News Desk

Please login to join discussion

ಕ್ಯಾಲೆಂಡರ್

February 2026
MTWTFSS
 1
2345678
9101112131415
16171819202122
232425262728 
« Jan    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d