
ಶಿರಸಿ: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರ ಬೆಂಬಲಿತ ಬಣವು ಸ್ಪಷ್ಟ ಬಹುಮತ ಸಾಧಿಸುವ ಮೂಲಕ ಬ್ಯಾಂಕ್‌ನ ಆಡಳಿತ ಚುಕ್ಕಾಣಿ ಹಿಡಿಯುವ ಸ್ಥಿತಿಗೆ ಬಂದಿದೆ.

ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯಿಂದ ಬಾಕಿ ಉಳಿದಿದ್ದ ‘ಗ್ರಾಹಕರ ಹಾಗೂ ಸಂಸ್ಕರಣಾ ಸಹಕಾರಿ ಸಂಘಗಳ’ ಕ್ಷೇತ್ರದ ಮತ ಎಣಿಕೆ ಶನಿವಾರ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ನಡೆಯಿತು. ಬಹಳ ಕುತೂಹಲ ಮೂಡಿಸಿದ್ದ ಈ ಕ್ಷೇತ್ರದಲ್ಲಿ ಹೆಬ್ಬಾರ್ ಬೆಂಬಲಿತ ಅಭ್ಯರ್ಥಿ ನಿರಂಜನ ಭಟ್ ಅವರು 20 ಮತಗಳನ್ನು ಪಡೆದು ಜಯಗಳಿಸಿದರೆ, ಎದುರಾಳಿ ತಿಮ್ಮಯ್ಯ ಹೆಗಡೆ 14 ಮತಗಳಿಗೆ ಸೀಮಿತರಾದರು.

ಈ ಫಲಿತಾಂಶದೊಂದಿಗೆ ಒಟ್ಟು 16 ನಿರ್ದೇಶಕ ಸ್ಥಾನಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಿವರಾಮ ಹೆಬ್ಬಾರ್ ಬಣ 11 ಸ್ಥಾನಗಳನ್ನು ಗೆದ್ದುಕೊಂಡರೆ, ಸಚಿವ ಮಂಕಾಳ ವೈದ್ಯ ಅವರ ಬೆಂಬಲಿತರು 5 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ.ವಿಳಂಬದ ಬಳಿಕ ಅಂತಿಮ ಫಲಿತಾಂಶಕ ಳೆದ ಅಕ್ಟೋಬರ್ 25ರಂದು ಚುನಾವಣೆ ನಡೆದಿದ್ದರೂ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆಗಳ ಕಾರಣ ಫಲಿತಾಂಶ ಪ್ರಕಟಣೆ ವಿಳಂಬವಾಗಿತ್ತು. ಧಾರವಾಡ ಹೈಕೋರ್ಟ್ ನಿರ್ದೇಶನದಂತೆ ಫೆಬ್ರವರಿ 7ರಂದು ಬಾಕಿ ಉಳಿದ ಕ್ಷೇತ್ರದ ಮತ ಎಣಿಕೆ ನಡೆಸಲಾಯಿತು. ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಚಂದ್ರಶೇಖರ ಜಿ.ಆರ್. ಕಾರ್ಯನಿರ್ವಹಿಸಿದರು.
ಹಾಲಿ ಅಧ್ಯಕ್ಷರಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಅವರು ಮರು ಆಯ್ಕೆಯಾಗುವ ಸಾಧ್ಯತೆಗಳು ಬಲವಾಗಿದ್ದು, ಉಪಾಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಆಯ್ಕೆಯಾದ ನೂತನ ನಿರ್ದೇಶಕರು
ಶಿರಸಿ: ಎಂ.ಎ. ಹೆಗಡೆ
ಯಲ್ಲಾಪುರ: ಶಿವರಾಮ ಹೆಬ್ಬಾರ್
ಸಿದ್ದಾಪುರ: ರಾಘವೇಂದ್ರ ಶಾಸ್ತ್ರಿ
ಕುಮಟಾ: ರಾಜಗೋಪಾಲ ಅಡಿ
ಭಟ್ಕಳ: ಮಂಕಾಳ ವೈದ್ಯ
ಹೊನ್ನಾವರ: ವಿಶಾಲ್ ಭಟ್
ಅಂಕೋಲಾ: ಬಾಬು ಸುಂಕೇರಿ
ಕಾರವಾರ: ಪ್ರಕಾಶ ಗುನಗಿ
ಹಳಿಯಾಳ: ಎಸ್.ಎಲ್. ಘೋಟೇಕರ್
ಮುಂಡಗೋಡ: ಎಚ್.ಎಂ. ನಾಯ್ಕ
ಜೋಯಿಡಾ: ಕೃಷ್ಣ ದೇಸಾಯಿ
ಗ್ರಾಹಕರ–ಸಂಸ್ಕರಣ: ನಿರಂಜನ ಭಟ್
ಮಾರ್ಕೆಟಿಂಗ್: ರವಿ ಹೆಗಡೆ
ಸೌಹಾರ್ದ: ಮೋಹನ್ ನಾಯಕ್
ಜೇನು: ವಿಶ್ವನಾಥ ಭಟ್
ಹಾಲು ಉತ್ಪಾದಕರು: ಸುರೇಶ್ಚಂದ್ರ ಹೆಗಡೆ

